ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ. 5. ಪುತ್ತೂರು ತಾಲೂಕು, ನರಿಮೊಗರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಖಾಲಿ ಇರುವ ಒಂದು ಮೇಲ್ವಿಚಾರಕರ ಸ್ಥಾನವನ್ನು ಗೌರವ ಸಂಭಾವನೆ ರೂ  7 ಸಾವಿರ ಆಧಾರದ ಮೇಲೆ ಎಸ್.ಎಸ್.ಎಲ್.ಸಿ ಪಾಸಾದ ಹಾಗೂ ಅದೇ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಮೇಲ್ವಿಚಾರಕರ ಸ್ಥಾನಕ್ಕೆ ಪ್ರವರ್ಗ3 (ಎ) ಮೀಸಲಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿಯೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ್ ಅಥವಾ ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯ, ದೂರವಾಣಿ ಸಂಖ್ಯೆ 0824-2441905 ನ್ನು ಸಂಪರ್ಕಿಸಬಹುದು ಎಂದು  ಮಂಗಳೂರು, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಪ್ರಕಟಣೆ ತಿಳಿಸಿದೆ.

Also Read  ಸುಳ್ಯ: 110 ಕೆ.ವಿ. ಸಬ್‌ಸ್ಟೇಷನ್‌ ಗಾಗಿ ಸರ್ವೆ ➤ 2,600 ಮರಗಳಿಗೆ ಬೀಳಲಿದೆ ಕೊಡಲಿಯೇಟು

error: Content is protected !!
Scroll to Top