ಶಾಸಕರ ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.31   ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ದ.ಕ ಜಿಲ್ಲೆಯ  ಪುತ್ತೂರು  ವಿಧಾನಸಭಾ ಕ್ಷೇತ್ರ ಸದಸ್ಯ ಸಂಜೀವ ಮಠಂದೂರು  ಇವರ 2018-19ನೇ ಸಾಲಿನ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯ 4 ನೇ ವಾರ್ಡ್‍ನ ಬನ್ನೂರು ಜನತಾ ಕಾಲೊನಿ ಹೋಗುವ ಮುಖ್ಯರಸ್ತೆಯಿಂದ ಕವಲೊಡೆದು ದೇವದಾಸ್ ಶೆಟ್ಟಿಯವರ ಮನೆಗೆ ಹೋಗುವ ಕಾಂಕ್ರೀಟ್ ರಸ್ತೆ ಮುಂದುವರಿದ ಕಾಮಗಾರಿಗೆ ರೂ.2 ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ 14 ನೇ ವಾರ್ಡ್ ಹಾರಾಡಿ ಬನ್ನೂರು ರಸ್ತೆಯಲ್ಲಿ ಮೆಸ್ಕಾಂ ಕ್ವಾಟ್ರರ್ಸ್ ಎದುರು ಇಂದಿರಾ ಡ್ರೈವಿಂಗ್ ಸ್ಕೂಲ್‍ನಿಂದ ಮುಂದಕ್ಕೆ ಕಾಂಕ್ರೀಟ್ ಚರಂಡಿ ರಚನೆ ಕಾಮಗಾರಿಗೆ ರೂ. 2 ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ 5 ನೇ ವಾರ್ಡ್ ಬನ್ನೂರು ಜೋಡುಕಟ್ಟೆ ಆನೆಮಜಲು ಕಾಂಕ್ರೀಟ್ ರಸ್ತೆ ಮುಂದುವರಿದ ಕಾಮಗಾರಿಗೆ ರೂ. 2 ಲಕ್ಷ, ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಆನೆಪದವು ಪರಿಶಿಷ್ಟ ಪಂಗಡದವರ ಕಾಲೋನಿ ರಸ್ತೆ ಬದಿ ತಡೆಗೋಡೆ ರಚನೆಗೆ ರೂ. 1.97 ಲಕ್ಷ, ಪುತ್ತೂರು ನಗರಾ ಸಭಾ ವ್ಯಾಪ್ತಿಯ 13 ನೇ ವಾರ್ಡ್ ಕೊಂಬೆಟ್ಟು ಅಟಲ್ ಉದ್ಯಾನವನ ರಚನೆ ಕಾಮಗಾರಿಗೆ ರೂ.2 ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ 26 ನೇ ವಾರ್ಡ್ ದುರ್ಗಾ ನಗರದಲ್ಲಿ ಚರಂಡಿ ರಚನೆಗೆ ರೂ.1 ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ ನೆಹರೂ ನಗರ ಬಸ್ ತಂಗುದಾನದ ಬಳಿ ಬಸ್ ಬೇ ರಚನೆ ಕಾಮಗಾರಿಗೆ ರೂ. 3 ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ ಪಡ್ಡಾಯೂರು ಹರೀಶ್ ನಾಯ್ಕ್ ಮನೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.3 ಲಕ್ಷ, ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಬಿಸಿಯೂಟಕ್ಕೆ ಶಾಲೆಯಲ್ಲಿಯೇ ಬೆಳೆದರು ತರಕಾರಿ ➤ನೂಜಿಬಾಳ್ತಿಲ ಶಾಲೆಯಲ್ಲಿದೆ ವಿವಿಧ ಬಗೆಯ ತರಕಾರಿ ಕೈ ತೋಟ

error: Content is protected !!
Scroll to Top