ನಮ್ಮೊಳಗಿನ ಗಾಂಧೀಜಿಯನ್ನು ಬಡಿದೆಬ್ಬಿಸಿ – ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.31     ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್‍ನಲ್ಲಿ ಹುತಾತ್ಮರ ದಿನಾಚರಣೆಯನ್ನು ನಿನ್ನೆ ಆಚರಿಸಲಾಯಿತು.

ಬೆಳಗ್ಗೆ 11.00ಕ್ಕೆ ಗಾಂಧೀಜಿಯವರ ಭಾವಚಿತ್ರವನ್ನಿಟ್ಟು 2 ನಿಮಿಷದ ಮೌನಾಚರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ ಚೂಂತಾರು ಇವರು ಗಾಂಧೀಜಿಯವರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯವರ ಆದರ್ಶಗಳು ಸುಪ್ತವಾಗಿದೆ. ಈ ಸುಪ್ತವಾಗಿರುವ ಆದರ್ಶಗಳನ್ನು ಎಚ್ಚರಿಸಿ ನಮ್ಮೊಳಗಿನ ಗಾಂಧೀಜಿಯವರನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ಅಧೀಕ್ಷಕರಾದ ಶ್ರೀ ಎ. ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್. ಮತ್ತು ದಿವಾಕರ್, ಸನತ್, ಸುಲೋಚನ ಉಪಸ್ಥಿತರಿದ್ದರು.

Also Read  ಉಪ್ಪಿನಂಗಡಿಯ ನವಜೋಡಿಗೆ ವೈವಾಹಿಕ ಶುಭಾಶಯ ಕೋರಿದ ಪ್ರಧಾನಿ ಮೋದಿ ► ಪ್ರಧಾನಿಯ ಪತ್ರದಿಂದ ಮದುವೆ ಮನೆಯಲ್ಲಿ ಮೇರೆ ಮೀರಿದ ಸಂಭ್ರಮ

error: Content is protected !!
Scroll to Top