ಕೊಣಾಜೆ ದೈವಸ್ಥಾನ; ಹಸಿರುವಾಣಿ ಸಮರ್ಪಣೆ

(ನ್ಯೂಸ್ ಕಡಬ) newskadaba.com, ಕಡಬ, ಜ.30    ಕಡ್ಯ ಕೊಣಾಜೆ ಗ್ರಾಮದ ಕೊಣಾಜೆ ಶ್ರೀ ಉಳ್ಳಾಕ್ಲು ಹಾಗೂ ಪರಿವಾರ ದೈವಗಳು ಮತ್ತು ಕಜಿಪಿತ್ತಿಲು ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಅಂಗವಾಗಿ ಹಸಿರುವಾಣಿ ದೈವಸ್ಥಾನಕ್ಕೆ ಸಮರ್ಪಿಸಲಾಯಿತು.


ಬುಧವಾರ ಕೊಣಾಜೆ ಪುತ್ತಿಗೆ ಗ್ರಾಮಸ್ಥರು, ಗುರುವಾರ ನೂಜಿಬಾಳ್ತಿಲ, ರೆಂಜಿಲಾಡಿ, ಐತ್ತೂರು ಭಾಗದ ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಉಗ್ರಾಣ ಮುಹೂರ್ತವನ್ನು ಪ್ರಧಾನ ಪೂಜಾರಿ ಕುಶಾಲಪ್ಪ ಗೌಡ ಆಯರ್ತಮನೆ ಪೂಜಾ ವಿಧಾನ ನೆರವೇರಿಸಿದರು. ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ವಾಲ್ಮೀಕಿ ಚಂದ್ರಶೇಖರ ಗೌಡ ಬ್ರಂತೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ ದೊಡ್ಡಮನೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟ್ರಮಣ ಬ್ರಂತೋಡು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಬ್ರಂತೋಡು, ಆರ್ಥಿಕ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ಬ್ರಂತೋಡು, ಕಡಬ ಸಿಎ ಬ್ಯಾಂಕ್ ಉಪಾಧ್ಯಕ್ಷ ರಘುಚಂದ್ರ ಮನೆಜಾಲು, ಕಡ್ಯ ಕೊಣಾಜೆ ಗ್ರಾ.ಪಂ ಉಪಾಧ್ಯಕ್ಷ ಯಶೋಧರ ಗೌಡ ಪಲ್ಲತಡ್ಕ ಸೇರಿದಂತೆ ವ್ಯವಸ್ಥಾಪನ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Also Read  ಉದ್ಯೋಗಾವಕಾಶ: ಅಕ್ಟೋಬರ್ 16ರಂದು ಸಂದರ್ಶನ

error: Content is protected !!
Scroll to Top