ಭವ ತರಂಗ ಮೌಲ್ಯಮಾಪನ; ಸಮ್ಯಕ್ತ್ ಜೈನ್ ಪ್ರಥಮ

(ನ್ಯೂಸ್ ಕಡಬ) newskadaba.com, ಕಡಬ, ಜ.30   ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ನಿನ ಅಂಗಸಂಸ್ಥೆಯಾದ ಬೆಂಗಳೂರಿನ ಹಳಸೂರು ಮಠ ತನ್ನ ಜ್ಞಾನ ಯಾತ್ರೆಯ ಭಾಗವಾಗಿ ಆಯೋಜಿಸಿದ್ದ ” ಜ್ಞಾನಯಾತ್ರೆ ಶ್ರೀ ರಾಮಕೃಷ್ಣ ವಿವೇಕಾನಂದ ಭವ ತರಂಗ ಮೌಲ್ಯಮಾಪನ ಪರೀಕ್ಷೆ” ಯಲ್ಲಿ ಕಡಬ ತಾಲೂಕಿನ ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿ ಸಮ್ಯಕ್ತ್ ಹೆಚ್. ಜೈನ್ ಕಡಬ ಇವರು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಎಳೆ ವಯಸ್ಸಿನಲ್ಲೇ ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಇವರು, ಈಗಾಗಲೇ ಮೂರು ಕೃತಿಗಳನ್ನು ಅನಾವರಣಗೊಳಿಸಿ ಸಾಹಿತ್ಯ ಲೋಕದಲ್ಲಿ ಮುನ್ನಡೆಯುತ್ತಿದ್ದಾರೆ. ಇವರು ನೂಜಿಬಾಳ್ತಿಲ ಗ್ರಾಮದ ಧರಣೇಂದ್ರ ಇಂದ್ರ ಮತ್ತು ಮಂಜುಳಾ ದಂಪತಿ ಪುತ್ರ.

Also Read  ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ ತಂಡ , ಹೆಲಿಕಾಪ್ಟರ್ ನಿಯೋಜನೆ ➤ ಸಂಸದೆ ಶೋಭಾ ಕರಂದ್ಲಾಜೆ

error: Content is protected !!
Scroll to Top