ಮಾಜಿ ಸೈನಿಕರಿಗೆ ಉದ್ಯೋಗ ಮೇಳ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.30   ಮಹಾ ನಿರ್ದೇಶಕರು ಪುನರ್ವಸತಿ, ನವದೆಹಲಿ ಸಿಐಐ ಇವರ ಸಹಯೋಗದೊಂದಿಗೆ ವಾಯುಸೇನೆ ತರಬೇತಿ ಮುಖ್ಯಾಲಯದ 16 ಟೆಟ್ರಾ ಸಾಲೆ, ವಾಯುಸೇನೆ ನೆಲೆ ಜಾಲಹಳ್ಳಿ ಬೆಂಗಳೂರು ಇಲ್ಲಿ ಫೆಬ್ರವರಿ 19 ರಂದು ಮಾಜಿ ಸೈನಿಕರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.


ಉದ್ಯೋಗಾಕಾಂಕ್ಷಿ ಮಾಜಿ ಸೈನಿಕರು ತಮ್ಮ ವೈಯಕ್ತಿಕ ಮಾಹಿತಿ (ಸಿವಿ) ಯ ಆರು ಪ್ರತಿಗಳೊಂದಿಗೆ ಹಾಗೂ ಮಾಜಿ ಸೈನಿಕರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‍ಗಳೊಂದಿಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇಲ್ಲಿಗೆ ಸಂಪರ್ಕಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top