ಸ್ವಸಹಾಯ ಸಂಘಗಳಿಗೆ ಡಿಜಿಟಲ್ ಪೇಮೆಂಡ್ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.30    ಉದ್ಯಮಶೀಲತೆ ಮತ್ತು ಜೀವನೋಪಾಯ ಬೆಂಗಳೂರು ಹಾಗೂ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಸಂಸ್ಥೆಯ ಮೂಲಕ ಮಂಗಳೂರು ಮಹಾನಗರಪಾಲಿಕೆಯ ಡೇ-ನಲ್ಮ್ ಯೋಜನೆಯ ಸ್ವಸಹಾಯ ಸಂಘ, ಪ್ರದೇಶ ಮತ್ತು ನಗರ ಮಟ್ಟದ ಒಕ್ಕೂಟಗಳ ಸದಸ್ಯರಿಗೆ ಡಿಜಿಟಲ್ ಪೇಮೆಂಡ್ ಸಾಕ್ಷರತಾ ತರಬೇತಿ ಕಾರ್ಯಕ್ರಮ ಜನವರಿ  28 ರಿಂದ 30 ರ ವರೆಗೆ ಆಯೋಜಿಸಲಾಗಿದೆ.

ತರಬೇತಿ ಕಾರ್ಯಕ್ರಮವನ್ನು ಮಹಾನಗರಪಾಲಿಕೆ ಆಯುಕ್ತ  ಎಸ್ ಅಜಿತ್ ಕುಮಾರ್ ಹೆಗ್ಡೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಗರದ ಬಡವರು ಕೂಡ ನಗದು ರಹಿತ ವ್ಯವಹಾರಕ್ಕೆ ತಮ್ಮ ಜೀವನದಲ್ಲಿ ಹೆಚ್ಚಿನ ಒತ್ತನ್ನು ನೀಡುವ ಮೂಲಕ ಕಾರ್ಯಕ್ರಮದ ಸದುಪಯೋಗವನ್ನು ಪಡೆಯಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಡೇ-ನಲ್ಮ್ ಸಮುದಾಯ ವ್ಯವಹಾರ ಅಧಿಕಾರಿ  ಮಾಲಿನಿ ರೊಡ್ರಿಗಸ್, ಅಭಿಯಾನ ವ್ಯವಸ್ಥಾಪಕ ಚಿತರಂಜನ್ ದಾಸ್ ಮತ್ತು ಅಚ್ಚುತ ನಾಯ್ಕ್ ಹಾಗೂ ನ್ಯಾಶನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಿಶಾಲ್ ಉಪಸ್ಥಿತರಿದ್ದರು.

Also Read  ಲಾಡ್ಜ್ ವೊಂದರಲ್ಲಿ  ವ್ಯಾಪಾರಿಯೊಬ್ಬರ ಮೃತದೇಹ ಪತ್ತೆ  

error: Content is protected !!
Scroll to Top