ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಸಿಬಿಎಸ್‍ ಇ ಬೋರ್ಡ್ ನವದೆಹಲಿಯಿಂದ 10ನೇ ತರಗತಿಯ ವರೆಗೆ ಮಾನ್ಯತೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.30   ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಗೆ ಸಿಬಿಎಸ್‍ಇ ಬೋರ್ಡ್ ನವದೆಹಲಿಯು 10ನೇ ತರಗತಿಯವರೆಗೆ ಮಾನ್ಯತೆಯನ್ನು ನೀಡಿದೆ.

ಅತಿಕಡಿಮೆ ಸಮಯದಲ್ಲಿ ಶಾಲೆಯ ಜಾಗತಿಕ ಮಟ್ಟದ ಮೂಲಭೂತ ಸೌಕರ್ಯವನ್ನು ಪರಿಗಣಿಸಿ ಪ್ರತಿ ತರಗತಿಯಲ್ಲಿ 40 ವಿದ್ಯಾರ್ಥಿಗಳ ತರ 4 ವಿಭಾಗಗಳಾಗಿ ಪ್ರಾರಂಭಿಸಲು ಅನುಮತಿಯನ್ನು ನೀಡಿರುತ್ತಾರೆ. ಮಾನ್ಯತೆ ಸಂಖ್ಯೆ– 830956 ನ್ನು ನೀಡಿರುತ್ತಾರೆ. ದಿನಾಂಕ 01-04-2020 ರಿಂದ 31-03-2023 ರತನಕ ಮಾನ್ಯತೆ ಮುಂದುವರಿಯುತ್ತದೆ ನಂತರ ಮಾನ್ಯತೆ ನವೀಕರಣವನ್ನು ಮಾಡುವಂತೆ ಸೂಚಿಸಲಾಗಿದೆ. ಸಿಬಿಎಸ್‍ಇ ಬೋರ್ಡ್‍ನ ಎಲ್ಲಾ ಮಾನದಂಡಗಳನ್ನು ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪೂರೈಸಿರುತ್ತದೆ. ಇದರ ಸದುಪಯೋಗವನ್ನು ಪೋಷಕರು ಪಡೆಯಬಹುದಾಗಿದೆ.

Also Read  ಲಾಕ್‌ಡೌನ್ ನಡುವೆ ಕಡಬ ಪೊಲೀಸರ ಮಿಂಚಿನ ಕಾರ್ಯಾಚರಣೆ ➤ ಕುಖ್ಯಾತ ಕಳ್ಳನ ಬಂಧನ

error: Content is protected !!
Scroll to Top