ಫೆ1 ಮತ್ತು ಫೆ2 ಆಲಂಕಾರು ಸರಕಾರಿ ಶಾಲಾ ಶತಮಾನೋತ್ಸವ ಸಮಾರಂಭ

(ನ್ಯೂಸ್ ಕಡಬ) newskadaba.com, ಕಡಬ, ಜ.30   ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇದರ ಶತಮಾನೋತ್ಸವ ಸಂಭ್ರಮ ಹಾಗೂ ನೂತನ ಕೊಠಡಿಗಳ ಉದ್ಟಾಟನಾ ಕಾರ್ಯಕ್ರಮಗಳು ಫೆ.1 ಮತ್ತು ಫೆ2ರಂದು ನಡೆಯಲಿದೆ. ಫೆ.1ರಂದು ಬೆಳಿಗ್ಗೆ 9ಕ್ಕೆ ಶಾಲಾ ಧ್ವಜಾರೋಹಣವನ್ನು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಮೂರ್ತಿ ಆಚಾರ್ ನೆರವೇರಿಸಲಿದ್ದಾರೆ. ಬಳಿಕ ಶತಸಂಭ್ರಮದ ಶೋಭಾಯಾತ್ರೆಯನ್ನು ನಿವೃತ್ತ ಕಂದಾಯ ನಿರೀಕ್ಷಕ ಅನಂತರಾವ್ ಉಳಿತ್ತಾಯ ನೆರವೇರಿಸಲಿದ್ದಾರೆ. ಬಳಿಕ ಆಲಂಕಾರು ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷ ಸದಾನಂದ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅಥಿತಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಇಂದುಶೇಖರ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ನೋನಪ್ಪ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್, ಸಿಆರ್ ಪಿ ಪ್ರದೀಪ್ ಬಾಕಿಲ, ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ನೆಕ್ಕರೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ ನಡುಮನೆ, ನಿವೃತ್ತ ಮುಖ್ಯಗುರು ಗುಮ್ಮಣ್ಣ ಗೌಡ ಮೊದಲಾದವರು ಉಪಸ್ಥಿತಿಯಲ್ಲಿ ನಡೆಯಲಿದೆ. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ.


ಸಂಜೆ 7ರಿಂದ ಶತಸಂಭ್ರಮದ ಶಾಶ್ವತ ನೆನಪಿನ ಕೊಡುಗೆಗಳ ಉದ್ಟಾಟನೆ ನಡೆಯಲಿದೆ. ಸುಳ್ಯ ಶಾಸಕ ಎಸ್ ಅಂಗಾರರವರ ಆಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ಶಾಲಾ ಹೆಚ್ಚುವರಿ ಕೊಠಡಿಗಳ ಉದ್ಟಾಟನೆಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಉದ್ಟಾಟಿಸಲಿದ್ದಾರೆ. ಅಲಂಕಾರ ಕಲಾ ಮಂದಿರವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಆಟದ ಮೈದಾನವನ್ನು ಸಂಸದ ನಳೀನ್ ಕುಮಾರ್ ಕಟೀಲ್, ದಾನಿಗಳ ನೆರವಿನಿಂದ ನಿರ್ಮಿಸಿದ ಕೊಠಡಿಗಳ ಉದ್ಟಾಟನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ವಿಧಾನ ಪರಿಷತ್ ಅನುದಾನಲ್ಲಿ ನಿರ್ಮಿಸಿದ ಕೊಠಡಿಗಳನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉದ್ಟಾಟಿಸಲಿದ್ದಾರೆ. ದಾನಿಗಳ ನಾಮ ಫಲಕವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅನಾವರಣಗೊಳಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯೆ ಪ್ರಮೀಳಾ ಜನಾರ್ಧನ್ ಗುರುವಂದನೆಯನ್ನು ನಿರ್ವಹಿಸಲಿದ್ದು, ತಾ.ಪಂ ಸದಸ್ಯೆ ತಾರಾ ಸಾಧಕರನ್ನು ಸನ್ಮಾನಿಸಲಿದ್ದಾರೆ. ಈ ಸಂಧರ್ಭದಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ ಬಾರ್ಕುಲಿ, ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿ ಮೆಲ್ಲೋ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಕೆ.ಇ.ಎಸ್, ಎಪಿಎಂಸಿ ಸದಸ್ಯ ಕೊರಗಪ್ಪ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ನಿವೃತ್ತ ಶಿಕ್ಷಕ ಟಿ.ಯಸ್.ಆಚಾರ್, ವಿನ್ಸೆಂಟ್ ಫೆರ್ನಾಂಡೀಸ್ ಉಪಸ್ಥಿತರಿರುವರು. ಇದೇ ವೇಳೆ ಶಿಕ್ಷಣ ಸಂತ ಹರೇಕಳ ಹಾಜಬ್ಬರವನ್ನು ಸನ್ಮಾನಿಸಲಾಗುವುದು.

ಫೆ.2ರಂದು ಶತಮಾನೋತ್ಸವ ಸಮಾರೋಪ ಸಮಾರಂಭವು ಸುಳ್ಯ ಶಾಸಕ ಎಸ್ ಅಂಗಾರರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂಧರ್ಭದಲ್ಲಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಯಸ್,ಯಲ್ ಸಾಧಕರನ್ನು ಸನ್ಮಾನಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಆಯನೂರ್ ಮಂಜುನಾಥ್, ಗ್ರಾ.ಪಂ ಸದಸ್ಯೆ ಭವಾನಿ, ರೇವತಿ ದಾನಿಗಳನ್ನು ಗೌರವಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಆಯುಕ್ತರ ಕಚೇರಿ ಉಪನಿರ್ದೇಶಕ ಶಿವರಾಮಯ್ಯ ವೈ, ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಉಡುಪಿ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ ಎಸ್, ಸುದಾನ ದೇವಾಲಯದ ಧರ್ಮಗುರು ರೆವರೆಂಡ್ ವಿಜಯ ಹಾರ್ವಿನ್, ವಿದ್ಯಾರಶ್ಮೀ ವಿದ್ಯಾಸಂಸ್ಥೆಗಳ ಸಂಚಾಲಕ ಸೀತಾರಾಮ ರೈ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ವಿಶ್ರಾಂತ ಪ್ರಾಂಶುಪಾಲ ಕೃಷ್ಣ ಪೂಜಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಆದಂ ಸಾಹೇಬ್, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಕೆ.ವಿಠಲ್ ರೈ, ವಿಷ್ಣು ದಯಾ ಪೌಂಡೇಶನ್‍ನ ವಿಷ್ಣುಮೂರ್ತಿ ಯಚ್, ನಿವೃತ್ತ ವಿಜ್ಞಾನಿ ಡಾ| ರಾಧಾಕೃಷ್ಣ ಬಿ.ಭಟ್, ಪಾಂಡುರಂಗ ಮಲ್ಯ, ನಿವೃತ್ತ ಕಂದಾಯ ನಿರೀಕ್ಷಕ ಅನಂತರಾಮ ಉಳಿತ್ತಾಯ ಮೊದಲಾದವರು ಆಗಮಿಸಲಿದ್ದಾರೆ. ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಟ್ಯರಾಧನ ನೃತ್ಯಾಲಯ ಹಾಗೂ ವಿದುಷಿ ಪ್ರಮೀಳಾ ಲೋಕೇಶ್ ಇವರ ನಿರ್ದೇಶನದಿಂದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಬಳಿಕ ಹಿರಿಯ ವಿದ್ಯಾರ್ಥಿಗಳಿಂದ “ಎನ್ನ ಕಥೆ ಬರೆಪ್ಪರಾ” ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಶಾಲಾ ಮುಖ್ಯಶಿಕ್ಷಕ ಕೆ.ಪಿ.ನಿಂಗರಾಜು ತಿಳಿಸಿದ್ದಾರೆ.

Also Read  ಕೊರೋನಾ ಸೋಂಕಿನ ಭೀತಿ ➤ ಬೆಂಕಿ ಹಚ್ಚಿ ಮಹಿಳೆ ಆತ್ಮಹತ್ಯೆ..!

error: Content is protected !!
Scroll to Top