ಅಂಚೆ ಪಾರ್ಸಲ್ – ವಿಶ್ವಾಸಾರ್ಹತೆ ದೃಢಪಡಿಸಲು ಸೂಚನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.29    ಇತ್ತೀಚಿನ ದಿನಗಳಲ್ಲಿ ಮೊಬೈಲ್, ವಾಚ್ ಇತ್ಯಾದಿಗಳನ್ನು ಕಳುಹಿಸುವ ಬಗ್ಗೆ ಫೋನ್ ನಲ್ಲಿ ಕರೆ ಅಥವಾ ಎಸ್.ಎಮ್.ಎಸ್. ಮೂಲಕ ಸಂದೇಶ ಬಂದಿದೆ ಎಂಬ ಕಾರಣಕ್ಕೆ ಅನೇಕ ಸಾರ್ವಜನಿಕರು ಕೆಲವು ಖಾಸಗಿ ಕಂಪನಿಗಳಿಂದ ಪಾರ್ಸಲ್‍ಗಳನ್ನು ವ್ಯಾಲ್ಯೂ ಪೇಯೇಬಲ್ ಪೋಸ್ಟ್ ಅಥವಾ ಬಟಾವಡೆಯ ಸಂದರ್ಭದಲ್ಲಿ ಪಾವತಿಸುವ ವಿಧಾನದ ಮೂಲಕ ತರಿಸಿಕೊಳ್ಳುತ್ತಿದ್ದಾರೆ.

ಆ ಪಾರ್ಸಲ್‍ನಲ್ಲಿ ಮೊಬೈಲ್, ವಾಚ್ ಇತ್ಯಾದಿಗಳ ಬದಲಿಗೆ ಲಕ್ಷ್ಮೀ ಯಂತ್ರ, ಲೋಹದ ಚೂರುಗಳು, ಬಟ್ಟೆ ಇತ್ಯಾದಿಗಳು ಮಾತ್ರ ಇವೆ ಎಂದು ಅಂಚೆ ಕಚೇರಿಗೆ ದೂರು ನೀಡುತ್ತಿದ್ದು, ಸಾರ್ವಜನಿಕರು ಅಂಥಹ ಕಂಪನಿಗಳಿಂದ ವಸ್ತುಗಳನ್ನು ತರಿಸಿಕೊಳ್ಳುವಾಗ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ತಾವೇ ಧೃಢಪಡಿಸಿಕೊಳ್ಳಬೇಕಾಗಿದೆ. ಅಂಚೆ ಇಲಾಖೆಯು ಈ ನಿಟ್ಟಿನಲ್ಲಿ ಉಂಟಾದ ನಷ್ಟಗಳನ್ನು ತುಂಬಿಸಿಕೊಡಲು ಯಾವುದೇ ರೀತಿಯಲ್ಲಿಯೂ ನಿಯಮಾವಳಿಗಳಲ್ಲಿ ಅವಕಾಶ ಇಲ್ಲವೆಂದು ಸಾರ್ವಜನಿಕರು ಗಮನಿಸಬೇಕು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

Also Read  ಆಲಂಕಾರು ಸಹಕಾರಿ ಸಂಘದ ಆಡಳಿತದಿಂದ ಅಧ್ಯಯನ ಹೆಸರಿನಲ್ಲಿ ಮೋಜಿನ ಪ್ರವಾಸ ➤ ಆಮ್ ಆದ್ಮಿ ಗಂಭೀರ ಆರೋಪ

error: Content is protected !!
Scroll to Top