ಮಣ್ಣಿನ ಬಳಕೆ ಇಲ್ಲದೇ ಸಸಿ ಬೆಳೆಯುವ ಹೊಸ ವಿಧಾನ ಆವಿಷ್ಕರಿಸಿದ ಏಟ್ರಿಯಾ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.29    ಹೊಸ ಆವಿಷ್ಕಾರಗಳಿಂದ ಮುಂಚೂಣಿಯಲ್ಲಿರುವ ಏಟ್ರಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದೀಗ ಮತ್ತೊಂದು ವಿಭಿನ್ನ ರೀತಿಯ ಆವಿಷ್ಕಾರ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಮಣ್ಣಿನ ಸಹಾಯವಿಲ್ಲದೇ ಸಸಿಗಳನ್ನು ಬೆಳಯುವ ವಿನೂತನ ಆವಿಷ್ಕಾರ ಮಾಡಿದ್ದಾರೆ. ಏಟ್ರಿಯಾ ವಿಶ್ವವಿದ್ಯಾಲಯದ ಸ್ವಯಂಸೇವಕ ವಿದ್ಯಾರ್ಥಿಗಳ ತಂಡವು ಸಸಿ ಮತ್ತು ಪೋಷಕಾಂಶಗಳ ಪೂರಕಗಳನ್ನು ಮೇಲ್ವಿಚಾರಣೆ ಮಾಡಲು ಐಒಟಿ ಆಧಾರಿತ ಮಾನಿಟರಿಂಗ್ ಸಾಧನವಾದ “ಹೈಡ್ರೋಪೋನಿಕ್ಸ್ ಮಾನಿಟರ್” ಅನ್ನು ವಿನ್ಯಾಸಗೊಳಿಸಿದ್ದಾರೆ.

ಹೈಡ್ರೋಪೋನಿಕ್ಸ್ ಒಂದು ಕೃಷಿ ತಂತ್ರವಾಗಿದ್ದು, ಮಣ್ಣಿನ ಸಹಾಯವಿಲ್ಲದೆ ಸಸ್ಯಗಳನ್ನು ನೀರು ಮತ್ತು ಪೋಷಕಾಂಶಗಳಲ್ಲಿ ಬೆಳೆಯಲಾಗುತ್ತದೆ. ಈ ಕೃಷಿ ವಿಧಾನವು ಮಣ್ಣಿನ ಆಧಾರಿತ ಕೃಷಿಗಿಂತ ಹೆಚ್ಚಿನ ಇಳುವರಿಯನ್ನು ನೀಡುತ್ತದೆ. ಜೊತೆಗೆ ಕೀಟನಾಶಕಗಳ ಬಳಕೆಯನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ಮಣ್ಣು ಇಲ್ಲದೆಯೇ ಸಸಿಗಳನ್ನು ಬೆಳೆಯಬಹುದು. ಇದರ ಕುರಿತು ಏಟ್ರಿಯಾ ತಂಡದ ಸದಸ್ಯರು ಹೈಡ್ರೋಪೋನಿಕ್ಸ್ ಮಾನಿಟರ್ ಅನ್ನು ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಸುಲಭವಾಗಿ ಹೊಂದಿಸಬಹುದು. ಮಣ್ಣನ್ನು ತರಲುವ ಅಗತ್ಯವೇ ಇರುವುದಿಲ್ಲ ಎನ್ನುತ್ತಾರೆ. ಜಗತ್ತನ್ನು ಹಸಿರು ಮತ್ತು ಆರೋಗ್ಯಕರವಾಗಿಸುವ ಪ್ರಯತ್ನದಲ್ಲಿ ಏಟ್ರಿಯಾ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಭಾಗವಾಗಿ ಅತ್ಯುತ್ತಮ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಡೀಪ್ ಟೆಕ್ ಅನ್ನು ಬಳಸಿಕೊಂಡು ಹೈಡ್ರೋಪೋನಿಕ್ಸ್ ಮೂಲಕ ಸಾಕಾರಗೊಳಿಸಲು ಹೊರಟಿದೆ.  ಈ ನೂತನ ವಿಧಾನದ ಬಳಕೆಯಿಂದ ಬೆಳೆಯುವ ಸಸಿಗಳು ಹಾಗೂ ಆಹಾರ ಪದಾರ್ಥಗಳು ಆರೋಗ್ಯ ಮತ್ತು ಜೀವನ ಮಟ್ಟವನ್ನು ಸುಧಾರಿಸಲು ಶ್ರಮಿಸುತ್ತದೆ ಮತ್ತು ಆಹಾರ ಪೂರೈಕೆ ಮತ್ತು ಆಹಾರ ಗುಣಮಟ್ಟದ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರ ನೀಡುತ್ತದೆ ಎಂದು ಹೇಳುತ್ತಾರೆ. ಈ ನೂತನ ಆವಿಷ್ಕಾರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಏಟ್ರಿಯಾ ವಿಶ್ವವಿದ್ಯಾಲಯದ ತಾಂತ್ರಿಕ ನಿರ್ದೇಶಕರಾದ ಶ್ರೀ ಕೌಶಿಕ್ ರಾಜು ಅವರನ್ನು ಭೇಟಿ ಮಾಡಬಹುದು. ಜೊತೆಗೆ ಈ ಆವಿಷ್ಕಾರದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ತಂಡದಿಂದಲೂ ಮಾಹಿತಿ ಪಡೆಯಬಹುದು.

error: Content is protected !!
Scroll to Top