ಇಂದಿನಿಂದ ಕೊಣಾಜೆ ಉಳ್ಳಾಕ್ಲು, ಸಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶ

(ನ್ಯೂಸ್ ಕಡಬ) newskadaba.com, ಕಡಬ, ಜ.29    ಕಡ್ಯ ಕೊಣಾಜೆ ಗ್ರಾಮದ ಕೊಣಾಜೆ ಶ್ರೀ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳು, ಕಜಿಪಿತ್ತಿಲು ದೈವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಉಳ್ಳಾಕ್ಲು, ಮುದೈರುಲ್ಲಾಯ, ಅಲ್ಲಾತ್ತಾಯ, ಹುಲಿಭೂತ, ರುದ್ರಚಾಮುಂಡಿ ಮತ್ತು ಸಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ.29ರಿಂದ  ಜ.31ರ ತನಕ ನಡೆಯಲಿದೆ.


ಇಂದು ಬೆಳಿಗ್ಗೆ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ, ಸಾಯಂಕಾಲ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಬಳಿಕ ದೇವತಾ ಪ್ರಾರ್ಥನೆ ಆಚಾರ್ಯವರಣೆ, ಸ್ವಸ್ತೀ ಪುಣ್ಯಹವಾಚನ ಭಂಡಾರ ಚಾವಡಿಯಲ್ಲಿ ಮತ್ತು ಮೂಲಸ್ಥಾನ(ಮಾಡ)ದಲ್ಲಿ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಜ.30ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಗಂಟೆ 8.48ರಿಂದ 9.32ರ ತನಕ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಉಳ್ಳಾಕ್ಲು ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ಕಜಿಪಿತ್ತಿಲು ಹುಲಿಭೂತ ದೈವ ಚಾವಡಿಯಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತೀ ಪುಣ್ಯಹವಾಚನ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ ನಡೆಯಲಿದೆ. ಜ.31ರಂದು ಬೆಳಿಗ್ಗೆ ಮಹಾಗಣಪತಿ ಹೋಮ ಬ್ರಹ್ಮಕಲಶ ಪೂಜೆ, ಹುಲಿಭೂತ, ರುದ್ರಚಾಮುಂಡಿ ದೈವಗಳ ಪುನಃ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ➤ ಅಪಾಯವಿಲ್ಲದೆ ಪಾರಾದ ಪ್ರಯಾಣಿಕರು

error: Content is protected !!
Scroll to Top