ಕೌಶಲ್ಯ ಪರೀಕ್ಷೆ ಹಾಗೂ ಪ್ರಮಾಣೀಕರಣ – ಉಚಿತ ತರಬೇತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25     ಭಾರತ ಸರ್ಕಾರ, ಪ್ರವಾಸೋದ್ಯಮ ಮಂತ್ರಾಲಯದಿಂದ ಪ್ರಾಯೋಜಿತ ಸ್ಕಿಲ್ ಟೆಸ್ಟಿಂಗ್ ಆ್ಯಂಡ್ ಸರ್ಟಿಫಿಕೇಶನ್ 6 ದಿನಗಳ ತರಬೇತಿಯನ್ನು ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಗಳಿಗೆ ಉಚಿತವಾಗಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ತರಬೇತಿಯ  ಕ್ಷೇತ್ರಗಳು:  ಆಹಾರ ತಯಾರಿಕೆ, ಆಹಾರ ವಿತರಣೆ, ವಸತಿ ನಿರ್ವಹಣೆ, ಬೇಕರಿ. ತರಬೇತಿಯ ನಿಯಮ ಹಾಗೂ ನಿಬಂಧನೆಗಳು: ಅಭ್ಯರ್ಥಿಗಳು ಹೋಟೆಲ್, ರೆಸ್ಸಾಟ್ರ್ಸ್, ರೆಸ್ಟೋರೆಂಟ್, ಕ್ಯಾಂಟೀನ್, ಡಾಬಾ, ಅತಿಥಿಗೃಹ, ಕ್ಲಬ್‍ಹೌಸ್, ಹಾಸ್ಟೆಲ್ಸ್, ಹೋಂಸ್ಟೇ, ಮೆಸ್ ಮುಂತಾದ ಕೇಟರಿಂಗ್ ಕ್ಷೇತ್ರದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು.. ಈ ತರಬೇತಿಗೆ ವಯಸ್ಸಿನ ಮೇಲಿನ ಗರಿಷ್ಠ ವಯೋಮಿತಿ ಇರುವುದಿಲ್ಲ ಹಾಗೂ ವಿದ್ಯಾಭ್ಯಾಸದ ಅರ್ಹತೆ ಬೇಕಾಗಿರುವುದಿಲ್ಲ. ಈ 6 ದಿನಗಳ ತರಬೇತಿಯನ್ನು ಎಫ್.ಸಿ.ಐ ಮೈಸೂರು ಸಂಸ್ಥೆಯಲ್ಲಿ ನೀಡಲಾಗುತ್ತಿದ್ದು, ಮದ್ಯಾಹ್ನದ ಊಟ ಉಚಿತವಾಗಿರುತ್ತದೆ. ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯರವರಿಂದ ಹಾಗೂ ಎಫ್.ಸಿ.ಐ ಇಂದ ಪ್ರಮಾಣ ಪತ್ರ ನೀಡಲಾಗುವುದು. ಅಗತ್ಯ ದಾಖಲೆಗಳು: ಉದ್ಯೋಗದಾತರಿಂದ ಸೇವಾ ಪ್ರಮಾಣ ಪತ್ರ, ಆಧಾರ್ ಕಾರ್ಡ್‍ನ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್, ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಇತ್ತೀಚಿನ 2 ಭಾವಚಿತ್ರದೊಂದಿಗೆ ಸಲ್ಲಿಸಬೇಕು. ತರಬೇತಿಯನ್ನು  ಫುಡ್ ಕ್ರಾಫ್ಟ್ ಇನ್ಸ್‍ಸ್ಟಿಟ್ಯೂಟ್, ಕನ್ನಡ ಕಾರಂಜಿ ಕಟ್ಟಡದ ಮೊದಲನೇ ಮಹಡಿ, ದಸರಾ ವಸ್ತು ಪ್ರದರ್ಶನ ಆವರಣ, ದೊಡ್ಡಕೆರೆ ಮೈದಾನ, ಇಂದಿರಾನಗರ, ಮೈಸೂರು ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 6362018821, 0821-2445388, 2974388 ನ್ನು ಸಂಪರ್ಕಿಸಲು  ಮೈಸೂರು, ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Also Read  ಉಡುಪಿ: ಅಕ್ರಮವಾಗಿ ಸ್ಪೋಟಕ ಬಳಸಿ ನಡೆಸುತ್ತಿದ್ದ ಕಲ್ಲುಕೋರೆಗೆ ಅಧಿಕಾರಿಗಳಿಂದ ದಾಳಿ

error: Content is protected !!
Scroll to Top