ದ.ಕ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.25    ದಕ್ಷಿಣ ಕನ್ನಡ ಜಿಲ್ಲೆ ಸರ್ವೋತ್ತಮ ಸೇವಾ ಪ್ರಶಸ್ತಿ-2020 ಗೆ ಆಯ್ಕೆಯಾದ ಸರ್ಕಾರಿ ನೌಕರರ ಹೆಸರು ಮತ್ತು ಹುದ್ದೆಯ ವಿವರ ಇಂತಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಂಗಳೂರು ಡಾ. ರಾಮಕೃಷ್ಣ ರಾವ್, ಕಾರ್ಮಿಕ ಅಧಿಕಾರಿ ಮಂಗಳೂರು ವಿಲ್ಮ ಎಲಿಜಬೆತ್ ತೌವ್ರೋ, ಉಪತಹಶೀಲ್ದಾರರು ತಾಲೂಕು ಕಚೇರಿ ಮಂಗಳೂರು ವತ್ಸಲ, ಕಂದಾಯ ನಿರೀಕ್ಷಕರು ತಾಲೂಕು ಕಚೇರಿ ಸುಳ್ಯ ಕೊರಗಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಬಿ ಉಗ್ಗಪ್ಪ ಮೂಲ್ಯ, ಸಹಾಯಕ ಇಂಜಿನಿಯರ್ ಮಂಗಳೂರು ಆನಂದ ಎಸ್. ಬಂಜನ್, ಶುಶ್ರೂಷಕಿ ವೆನ್‍ಲಾಕ್ ಆಸ್ಪತ್ರೆ ಮಂಗಳೂರು, ಸುಮಂಗಲ, ದ್ವಿತೀಯ ದರ್ಜೆ ಸಹಾಯಕರು, ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಮಂಗಳೂರು ರತ್ನಾಕರ ಕೊಠಾರಿ, ಶಿರೆಸ್ತೇದಾರ್, ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ, ಮಂಗಳೂರು ಪ್ರಕಾಶ್ ನಾಯಕ್, ಹಿರಿಯ ವಾಹನ ಚಾಲಕ ಕೃಷಿ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು ಎಂ ದೇವದಾಸ ಆಯ್ಕೆಯಾಗಿರುತ್ತಾರೆ.

Also Read  ದಕ್ಷಿಣ ಕನ್ನಡದ ಈ ಗ್ರಾಮಾದಲ್ಲಿಒಂದೇ ಒಂದು ಕೊರೊನಾ ಪ್ರಕರಣ ವರದಿಯಾಗಿಲ್ಲ..!?

ಜನವರಿ 26 ರಂದು ನೆಹರು ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದವರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top