ಇಂಜಿನಿಯರ್ ಗಳಿಗೆ ತರಭೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.24    ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ ಸ್ಟಿಟ್ಯೂಟ್ ರೂರ್ಕೆ (ಉತ್ತರಾಕಾಂಡ) ಇವರು ದ.ಕ. ನಿರ್ಮಿತಿ ಕೇಂದ್ರದ ಸಹಕಾರದೊಂದಿಗೆ ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಮಂಗಳೂರು ಮಹಾನಗರಪಾಲಿಕೆ ಇವರ ಮಾರ್ಗದರ್ಶನದೊಂದಿಗೆ ಮಂಗಳೂರು ದ.ಕ. ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಸ್ಕಿಲ್ ಡೆವಲ ಪ್‍ಮೆಂಟ್ ಟ್ರೈನಿಂಗ್ ಪ್ರೋಗ್ರಾಮ್ ಆನ್ ಇನ್ನೊವೇಟಿವ್ ಟೆಕ್ನೋಲೊಜಿಸ್ ಫರ್ ಕಂಸ್ಟ್ರಕ್ಷನ್ ಆಫ್ ಡಿಸಾಸ್ಟರ್ ರೆಸಿಲಿಯೆಂಟ್ ಹ್ಯಾಬಿಟಾಟ್ ಫರ್ ಇಂಜಿನೀಯರ್ಸ್ & ಆರ್ಕಿಟೆಕ್ಟ್ಸ್”  ಎಂಬ ವಿಷಯದ ಬಗ್ಗೆ ಫೆಬ್ರವರಿ 7 ಮತ್ತು  8 ರಂದು ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಸಿಎಸ್‍ಐಆರ್ ನುರಿತ ವಿಜ್ಞಾನಿಗಳು ಮಾರ್ಗದರ್ಶನ ನೀಡಲು ಆಗಮಿಸುತ್ತಿದ್ದು “ವಿಪತ್ತು ನಿರ್ವಹಣಾ ವಸತಿ ಸಮುಚ್ಛಯಗಳನ್ನು ನವೀನ ತಂತ್ರಜ್ಞಾನಗಳ ಮೂಲಕ ವಾಸಸ್ಥಾನ ನಿರ್ಮಾಣ ಬಗ್ಗೆ” ವಿಜ್ಞಾನಿಗಳು ಸ್ವತಃ ಮಾರ್ಗದರ್ಶನ ನೀಡಲಿರುವರು. ಈ ಕಾರ್ಯಕ್ರಮ ಇಂಜಿನಿಯರ್ ಗಳಿಗೆ, ಆರ್ಕಿಟೆಕ್ಟ್ ಗಳಿಗೆ, ವಿವಿಧ ಸರಕಾರಿ ಇಲಾಖಾ ಇಂಜಿನಿಯರ್ ಗಳಿಗೆ ಹಾಗೂ ಕಂಟ್ರಾಕ್ಟರ್ ಗಳಿಗೆ ಸಹಾಯವಾಗಲಿದೆ. ಈ 2 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ. ಮುಕ್ತ ಪ್ರವೇಶವಿದೆ. ಆಸಕ್ತಿಯುಳ್ಳವರು ದ.ಕ. ನಿರ್ಮಿತಿ ಕೇಂದ್ರದ ಕಚೇರಿ, ದೂರವಾಣಿ ಸಂಖ್ಯೆ: 0824-2476727 ಅಥವಾ 9448287534 ಇಲ್ಲಿ ನೊಂದಾಯಿಸಿಕೊಳ್ಳಬಹುದು ಹಾಗೂ ತರಬೇತಿಗೆ ಹಾಜರಾಗಬಹುದು ಎಂದು ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group