ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆಫ್‍ಲೈನ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.24    2019-20ನೇ ಸಾಲಿನಲ್ಲಿ ವರ್ಗಗಳ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಆಫ್‍ಲೈನ್ ಅರ್ಜಿ ಆಹ್ವಾನಿಸಿದೆ.


ಅರ್ಜಿ ಸಲ್ಲಿಸಬಹುದಾದ ಅರ್ಹ ಅಭ್ಯರ್ಥಿಗಳು : 1) ಹೊರ ರಾಜ್ಯಗಳಲ್ಲಿ ಓದುತ್ತಿರುವ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು. 2) 2004ನೇ ಇಸವಿಯ ಮುಂಚೆ ಎಸ್.ಎಸ್.ಎಲ್.ಸಿ ತರಗತಿ ಮುಗಿಸಿರುವಂತಹ ವಿದ್ಯಾರ್ಥಿಗಳು, 3) ಕರ್ನಾಟಕ ರಾಜ್ಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ/ಪಿ.ಯು.ಸಿ ತರಗತಿಗಳನ್ನು ಹೊರರಾಜ್ಯಗಳಲ್ಲಿ ಓದಿದ್ದು,  ಕರ್ನಾಟಕ ರಾಜ್ಯದಲ್ಲಿ ಈಗ ಪಿಯುಸಿ/ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, 4)ಎಸ್.ಎಸ್.ಎಲ್.ಸಿ/ಪಿ.ಯು.ಸಿ ತರಗತಿಗಳನ್ನು ಐಜಿಸಿಎಸ್‍ಇ ಸಿಲೇಬಸ್‍ನಲ್ಲಿ ವ್ಯಾಸಂಗ ಮಾಡಿರುವಂತಹ ವಿದ್ಯಾರ್ಥಿಗಳು, 5) ಎಸ್.ಎಸ್.ಎಲ್.ಸಿ/ಪಿ.ಯು.ಸಿ ತರಗತಿಗಳನ್ನು  ನ್ಯಾಷನಲ್ ಓಪನ್ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಆಫ್‍ಲೈನ್ ಅರ್ಜಿಯನ್ನು ಜಿಲ್ಲಾ ಕಚೇರಿಯಿಂದ ಪಡೆದು, ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಅಝಾದ್ ಭವನ, ಓಲ್ಡ್‍ಕೆಂಟ್‍ರೋಡ್, ಪಾಂಡೇಶ್ವರ, ಮಂಗಳೂರು ಇಲ್ಲಿಗೆ ಸಂಪರ್ಕಿಸಬಹುದು ಎಂದು  ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ  ಪ್ರಕಟಣೆ ತಿಳಿಸಿದೆ.

Also Read  ಪೋಸ್ಟ್ ಮ್ಯಾನ್ ಗೆ ಕೊರೋನಾ ನೆಗೆಟಿವ್ ➤ ಗಂಟಲ ದ್ರವ ಪರೀಕ್ಷೆ ವರದಿಯಲ್ಲಿ ದೃಢ

error: Content is protected !!
Scroll to Top