ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಶ್ರಮದಾನ

(ನ್ಯೂಸ್ ಕಡಬ) newskadaba.com, ಕಡಬ, ಜ.24   ಶತಮಾನೋತ್ಸವ ಸಂಭ್ರಮದಲ್ಲಿರುವ ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪೋಷಕರ ಶ್ರಮದಾನ ನಡೆಯಿತು. ಶಾಲಾ ಆವರಣ ಸ್ವಚ್ಚ ಮಾಡುವುದರ ಮೂಲಕ ಸಮಾರಂಭಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳಲಾಯಿತು.

ಬಳಿಕ ಶಾಲಾ ಮುಖ್ಯ ಶಿಕ್ಷಕ ಕೆ.ಪಿ. ನಿಂಗರಾಜು ನೇತೃತ್ವದಲ್ಲಿ ಶತಮಾನೋತ್ಸವ ಸಮಾರಂಭದ ದಿನದಂದು ಪೊಷಕರ ಜವಾಬ್ದಾರಿಯ ಬಗ್ಗೆ ಸಮಾಲೋಚನೆ ಹಾಗೂ ಪೊಷಕರೊಂದಿನ ಚರ್ಚೆ, ವಿಚಾರ ವಿನಿಮಯದ ಸಭೆಯು ನಡೆಯಿತು. ಈ ಸಂಧರ್ಭದಲ್ಲಿ ಶಾಲಾಭಿವೃದ್ದಿಯ ಅಧ್ಯಕ್ಷ ಅಬೂಬಕ್ಕರ್ ನೆಕ್ಕರೆ, ಉಪಾಧ್ಯಕ್ಷ ಜನಾರ್ಧನ ಗೌಡ ನಾಡ್ತಿಲ, ಚಂದ್ರ ದೇವಾಡಿಗ, ರವಿ ಕುಂಞ್ಞಲಡ್ಡ, ಕೇಶವ ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು.

Also Read  ಪ್ರಜ್ಞಾ ಸಲಹಾ ಕೇಂದ್ರ  - ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

error: Content is protected !!
Scroll to Top