ಮಾಜಿ ಪ್ಲಟೂನ್ ಕಮಾಂಡರ್ ಸುಬ್ರಾಯ ಪೈ ಇವರಿಗೆ ಶ್ರಧ್ದಾಂಜಲಿ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23   ಇತ್ತೀಚೆಗೆ ನಿಧನ ಹೊಂದಿದ ಮಂಗಳೂರು ಘಟಕದ ಮಾಜಿ ಘಟಕಾಧಿಕಾರಿ ಸುಬ್ರಾಯ ಪೈ. ಇವರಿಗೆ ಇಂದು ಬೆಳಿಗ್ಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಯಿತು.

ಈ ಸಭೆಯಲ್ಲಿ ಸಮಾದೇಷ್ಟರು ಮಾತನಾಡಿ, ಸುಬ್ರಾಯ ಪೈ ಇವರು ದಿನಾಂಕ 06-09-1984 ರಂದು ಗೃಹರಕ್ಷಕ ದಳಕ್ಕೆ ಸೇರ್ಪಡೆಗೊಂಡು ದಿನಾಂಕ 23-03-2009 ರಂದು ಗೃಹರಕ್ಷಕ ಸಂಸ್ಥೆಯಿಂದ ನಿವೃತ್ತಿ ಹೊಂದಿ ಸುಮಾರು 25 ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. ನಾನು ಇಲಾಖೆಗೆ ಸೇರುವ ಮೊದಲೇ ಸಂಸ್ಥೆಯಿಂದ ನಿವೃತ್ತಿ ಹೊಂದಿದ್ದರೂ ಸಹ ಅವರು ಆಗಾಗ ಪೋನ್ ಮಾಡಿ ಇಲಾಖೆಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಇಲಾಖೆಯ ಮೇಲೆ ವಿಶೇಷ ಅಭಿಮಾನವನ್ನು ಹೊಂದಿದ್ದರು. ಗೃಹರಕ್ಷಕರಾಗಿ ಸೇರ್ಪಡೆಗೊಂಡು ಹಂತ ಹಂತವಾಗಿ ಬಡ್ತಿಹೊಂದಿ ಹಿರಿಯ ಪ್ಲಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು ಹಾಗೂ ರಾಷ್ಟ್ರಪತಿ ಪದಕವನ್ನೂ ಸಹ ಪಡೆದಿದ್ದರು. ಇವರ ನಿಧನದಿಂದ ಗೃಹರಕ್ಷಕ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು. ಈ ಸಭೆಯಲ್ಲಿ ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ಶ್ರೀ ರಮೇಶ್, ಇವರು ಮಾತನಾಡಿ ಸಂಸ್ಥೆಯನ್ನು ಬಿಟ್ಟರೂ ಸಹ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಸುಬ್ರಾಯ್ ಪೈ ಇವರ ಪತ್ನಿ ಹಾಗೂ ಮಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮುಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್‍ಶೇರಾ, ಹಾಗೂ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ಕಬಕ: ಗೂಡ್ಸ್ ರಿಕ್ಷಾ ಢಿಕ್ಕಿ ► ಪಾದಚಾರಿ ಗಂಭೀರ

error: Content is protected !!
Scroll to Top