ಅಂಬಿಗರ ಚೌಡಯ್ಯ ವಚನಗಳ ರಾಜ್ಯ ಮಟ್ಟದ ಕಮ್ಮಟ ವಚನ ವಿವೇಕ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23   ಅಂಬಿಗರ ಚೌಡಯ್ಯ ಅಧ್ಯಯನ ಪೀಠವು 2019-20ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳ ನೇರ ಪಾಲ್ಗೊಳ್ಳುವಿಕೆ ಹಾಗೂ ಅಂಬಿಗರ ಚೌಡಯ್ಯನವರ ವಚನಗಳನ್ನು ಓದಿ ವಿವೇಚಿಸುವಂತೆ ಉತ್ತೇಜನ ನೀಡುವ ಮತ್ತು ವಚನಗಳು ಪ್ರತಿಪಾದಿಸುವ ಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮತ್ತು ಕನ್ನಡ ವಿಭಾಗ ಆಳ್ವಾಸ್ ಕಾಲೇಜು, ಮೂಡುಬಿದಿರೆ ಸಹಯೋಗದಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯ ಮಟ್ಟದ ಕಮ್ಮಟ ವಚನ ವಿವೇಕ ಕಾರ್ಯಕ್ರಮವನ್ನು ಜನವರಿ  24ರಂದು  ಡಾ. ಶಿವರಾಮ ಕಾರಂತ ಸಭಾಂಗಣ ಆಳ್ವಾಸ್ ಕಾಲೇಜು, ಮೂಡುಬಿದಿರೆ ಇಲ್ಲಿ ನಡೆಸಲಾಗುವುದು.

ಕಾರ್ಯಕ್ರಮ ಉದ್ಘಾಟನೆ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಆಳ್ವಾಸ್ ಕಾಲೇಜು ಶಿಕ್ಷಣ ಪ್ರತಿಷ್ಠಾನ(ರಿ) ಮೂಡುಬಿದಿರೆ ಇದರ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ವಹಿಸಿಕೊಳ್ಳಲಿದ್ದಾರೆ. ಡಾ. ನಟರಾಜ ಬೂದಾಳು, ವಿಮರ್ಶಕರು, ತುಮಕೂರು ಇವರು ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನಾಡಲಿದ್ದಾರೆ. ಈ ಒಂದು ದಿನದ ರಾಜ್ಯ ಮಟ್ಟದ ಕಮ್ಮಟ ಕಾರ್ಯಕ್ರಮಕ್ಕೆ ಪ್ರತೀ ಕಾಲೇಜಿನಿಂದ ಒಬ್ಬ ಅಧ್ಯಾಪಕರೊಂದಿಗೆ ನಾಲ್ಕು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0824-2287988 ನ್ನು ಸಂಪರ್ಕಿಸಲು ಮಂಗಳೂರು ವಿಶ್ವವಿದ್ಯಾನಿಲಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸಂಯೋಜಕ ಡಾ. ನಾಗಪ್ಪ ಗೌಡ ಆರ್ ಇವರ ಪ್ರಕಟಣೆ ತಿಳಿಸಿದೆ.

Also Read  ಐಎಂಎ ಹಗರಣ ➤ ಐಪಿಎಸ್​ ಅಧಿಕಾರಿ ಅಜಯ್​ ಹಿಲೋರಿಗೆ ಸಿಬಿಐ ನೋಟೀಸ್

error: Content is protected !!
Scroll to Top