ಬೆಳ್ತಂಗಡಿ ತಾ.  ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23    ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಆನ್‍ಲೈನ್ ವೆಬ್‍ಸೈಟ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 11.


ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆ ವಿವರ ; ಬಾರ್ಯ ಗ್ರಾಮದ ಬೇಂಗಿಲ ಅಂಗನವಾಡಿ ಕೇಂದ್ರ (ಇತರೆ), ತೆಕ್ಕಾರು ಗ್ರಾಮದ ಸರಳೀಕಟ್ಟೆ ಅಂಗನವಾಡಿ ಕೇಂದ್ರ (ಇತರೆ), ಕಣಿಯೂರು ಗ್ರಾಮದ ಅಡೆಂಜ ಅಂಗನವಾಡಿ ಕೇಂದ್ರ (ಇತರೆ), ಕಾಶಿಪಟ್ನ ಗ್ರಾಮದ ಕಿರೋಡಿ (ಮಿನಿ) ಅಂಗನವಾಡಿ ಕೇಂದ್ರ (ಇತರೆ), ಕೊಕ್ಕಡ ಗ್ರಾಮದ ಪುತ್ತಿಗೆ ಅಂಗನವಾಡಿ ಕೇಂದ್ರ (ಇತರೆ). ಖಾಲಿ ಇರುವ ಅಂಗನವಾಡಿ ಸಹಾಯಕಿರ ಹುದ್ದೆ ವಿವರ: ಕೊಯ್ಯೂರು ಗ್ರಾಮದ ಮಲೆಬೆಟ್ಟು ಅಂಗನವಾಡಿ ಕೇಂದ್ರ (ಇತರೆ), ಕರಾಯ ಗ್ರಾಮದ ಕರಾಯ ಅಂಗನವಾಡಿ ಕೇಂದ್ರ (ಇತರೆ), ಪಾರೆಂಕಿ ಗ್ರಾಮದ ಕುಕ್ಕಳಬೆಟ್ಟು ಅಂಗನವಾಡಿ ಕೇಂದ್ರ (ಇತರೆ), ಕಳೆಂಜೆ ಗ್ರಾಮದ ಶಿಬರಾಜೆ ಅಂಗನವಾಡಿ ಕೇಂದ್ರ (ಇತರೆ),ಕಳೆಂಜೆ ಗ್ರಾಮದ ಕುಡ್ಪಾರು ಅಂಗನವಾಡಿ ಕೇಂದ್ರ (ಇತರೆ), ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಅಂಗನವಾಡಿ ಕೇಂದ್ರ (ಇತರೆ), ನಾಲ್ಕೂರು ಗ್ರಾಮದ ಸೂಳ್‍ಬೆಟ್ಟು ಅಂಗನವಾಡಿ ಕೇಂದ್ರ (ಇತರೆ). ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಬೆಳ್ತಂಗಡಿ, ದೂರವಾಣಿ ಸಂಖ್ಯೆ 08256-232134  ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬೆಳ್ತಂಗಡಿ ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬದ ಎಂ.ಜೆ. ವೆಜಿಟೆಬಲ್ಸ್ ನಲ್ಲಿ ವಿಶೇಷ ದರ ಕಡಿತ ಮಾರಾಟ ➤ ಈರುಳ್ಳಿ, ಟೊಮ್ಯಾಟೊ ಪ್ರತೀ ಕೆಜಿಗೆ 10 ರೂ. ಮಾತ್ರ

error: Content is protected !!
Scroll to Top