ಕೇಂದ್ರ ಸಚಿವ ಸದಾನಂದ ಗೌಡ ಪ್ರವಾಸ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23    ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಸದಾನಂದ ಗೌಡ ಇವರ ದ.ಕ ಜಿಲ್ಲಾ ಪ್ರವಾಸ ಹೀಗಿವೆ.


ಇಂದು ಸಂಜೆ 5.30 ಗಂಟೆಗೆ ಸುಳ್ಯ  ದೇವರಗುಂಡಕ್ಕೆ ಆಗಮಿಸಿ ವಾಸ್ತವ್ಯ. ನಾಳೆ ಬೆಳಗ್ಗೆ 10.30  ಗಂಟೆಗೆ ಧರ್ಮಸ್ಥಳದ ಧರ್ಮಶ್ರೀ  ಅನೆಕ್ಸ್ ಹೊಸ ಅವರಣದ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 2.30 ಗಂಟೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ   5 ಗಂಟೆಗೆ ಕಟೀಲು  ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ, ನಂತರ ಮಂಗಳೂರಿನಲ್ಲಿ ವಾಸ್ತವ್ಯ. 25 ರಂದು ಸಂಜೆ 5 ಗಂಟೆಗೆ ಮಂಗಳೂರಿನ  ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ  ರಾಮ ಲಕ್ಷ್ಮಣ ಜೋಡುಕೆರೆ ಕಂಬಳದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ  9.40 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.

Also Read  ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ

error: Content is protected !!
Scroll to Top