ಅಡಿಕೆ ಮತ್ತು ತೆಂಗಿನ ಮರ ಹತ್ತುವ ತರಬೇತಿ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23    ಕ್ಯಾಂಪ್ಕೊ ನಿಯಮಿತ ಮಂಗಳೂರು ಹಾಗೂ ರುಡ್‍ಸೆಟ್ ಸಂಸ್ಥೆ, ಉಜಿರೆ ಇವುಗಳ ಜಂಟಿ ಆಶ್ರಯದಲ್ಲಿ ಫೆಬ್ರವರಿ 3  ರಿಂದ 12 ರವರೆಗೆ 10 ದಿನಗಳ ಅಡಿಕೆ ಮತ್ತು ತೆಂಗಿನ ಮರ ಹತ್ತುವ ತರಬೇತಿಯನ್ನು ಉಜಿರೆ ರುಡ್‍ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

18 ರಿಂದ 45 ವರ್ಷಗಳ ವಯೋಮಿತಿಯವರು ಅರ್ಜಿಯನ್ನು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ  ನಿರ್ದೇಶಕರು, ರುಡ್‍ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ  ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ ಆನ್‍ಲೈನ್  ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.  ಅಭ್ಯರ್ಥಿಗಳು ಶಿಬಿರ ಪ್ರಾರಂಭದಿಂದ ಮುಗಿಯುವವರೆಗೆ ಮನೆಗಳಿಗೆ ತೆರಳುವಂತಿಲ್ಲ. ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು  ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಹತ್ತು ದಿವಸಗಳಿಗೆ  ಬೇಕಾದ ಬಟ್ಟೆ ದಿನ ಉಪಯೋಗಿ ವಸ್ತುಗಳನ್ನು ಬರುವಾಗ ತರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ನ್ನು ಸಂಪರ್ಕಿಸಲು ರುಡ್‍ಸೆಟ್ ಸಂಸ್ಥೆ, ಸಿದ್ದವನ ಉಜಿರೆ ಇವರ ಪ್ರಕಟಣೆ ತಿಳಿಸಿದೆ.

Also Read  ತುಳು ನಟ ಸುರೇಂದ್ರನನ್ನು ಕೊಲೆಗೈದಿದ್ದು ನಾನೇ ➤ ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ ಎಂದ ಆರೋಪಿ

error: Content is protected !!
Scroll to Top