ಶಕ್ತಿ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗೆ ಕಂಚಿನ ಪದಕ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23   ದೆಹಲಿಯ ಫರೀದಾಬಾದ್‍ ನಲ್ಲಿ ಯೂತ್‍ ಆ್ಯಕ್ಟಿವಿಟೀಸ್ ಫಾರ್ ಸುಪೀರಿಯರ್ ಹ್ಯುಮ್ಯಾನಿಟಿ ಸಂಸ್ಥೆಯು, ಮಾನವ್‍ ರಚನಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ, NOSTC (ನೆಟ್‍ವರ್ಕ್‍ ಆಫ್‍ ಆರ್ಗನೈಜೇಷನ್ ಫಾರ್ ಸೈನ್ಸ್‍ ಆ್ಯಂಡ್‍ ಟೆಕ್ನಾಲಜಿ ಕಮ್ಯುನಿಕೇಶನ್) ಹಾಗೂ ಸೈನ್ಸ್ ಸೊಸೈಟೀಸ್‍ ಆ್ಯಂಡ್ ಪಬ್ಲಿಕ್‍ ಟ್ರಸ್ಟ್ ನಸಹಯೋಗದಲ್ಲಿ ಮೂರು ದಿನಗಳ ಕಾಲ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಪನ್ಯಾಸ ಹಾಗೂ ಸ್ಪರ್ಧೆಗಳನ್ನು ಆಯೋಜಿಸಿತ್ತು.


14 ರಿಂದ 18 ವರ್ಷದೊಳಗಿನವರ ವಿಭಾಗದಲ್ಲಿ ಶಕ್ತಿ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶರತ್‍ ಕುಮಾರ್ ತೃತೀಯ ಬಹುಮಾನವನ್ನು ಪಡೆದಿದ್ದಾರೆ. ಇವರು ಮಂಡಿಸಿದ “ಹೈಡ್ರೋಜನ್‍ ಗ್ಯಾಸ್ ಬೈಕ್” ಪ್ರಬಂಧಕ್ಕೆ YASH ಸಂಸ್ಥೆಯು ಕಂಚಿನ ಪದಕ ನೀಡಿ ಗೌರವಿಸಿದೆ.

Also Read  ಉಡುಪಿ ಜಿಲ್ಲೆಯಲ್ಲಿಂದು 117 ಜನರಿಗೆ ಸೋಂಕು ದೃಢ

error: Content is protected !!
Scroll to Top