(ನ್ಯೂಸ್ ಕಡಬ) newskadaba.com, ಮಂಗಳೂರು, ಜ.22 ಹಿಂಗಾರು, ಹಂಗಾಮು ಭತ್ತದ ಬೆಳೆಯಲ್ಲಿ ಕಂದು ಜಿಗಿ ಹುಳು ಕೀಟ ಬಾಧೆಯು ಬೆಳ್ತಂಗಡಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಾಣಿಸಿಕೊಂಡಿರುತ್ತದೆ. ಈ ಕೀಟವು ರಸ ಹೀರುವ ಕೀಟಗಳ ಗುಂಪಿಗೆ ಸೇರಿರುವುದಾಗಿದ್ದು ಭತ್ತದ ಬೆಳೆಯ ಕಾಂಡದ ಭಾಗಗಳಲ್ಲಿ ಕುಳಿತು ರಸವನ್ನು ಹೀರುವ ಮೂಲಕ ಭತ್ತದ ಬೆಳಗೆ ಹಾನಿಯುಂಟು ಮಾಡುತ್ತದೆ.
ಈ ಕೀಟ ಬಾಧೆಯನ್ನು ತಡೆಗಟ್ಟಲು ಹೆಚ್ಚುವರಿ ಸಾರಜನಕ ಗೊಬ್ಬರ ಬಳಕೆಯನ್ನು ನಿಲ್ಲಿಸಬೇಕು ಹಾಗೂ ನೀರನ್ನು ಹೆಚ್ಚು ಗದ್ದೆಯಲ್ಲಿ ನಿಲ್ಲಿಸಬಾರದು. ಈ ಕೀಟದ ಹಾವಳಿಯನ್ನು ನಿಯಂತ್ರಿಸಲು ಬ್ಯುಪ್ರೋಫೆಜಿನ 1.5 ಮಿ.ಲೀ ಪ್ರತೀ ಲೀಟರ್ + ಥಯಾಮೆತಾಕ್ಸಾಮ್ 0.25 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರೆಸಿ ಬೆಳಗ್ಗೆ ಅಥವಾ ಸಂಜೆ ವೇಳೆ ಸಿಂಪಡಣೆ ಮಾಡುವುದರ ಮೂಲಕ ಹತೋಟಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08256-232092 ಹಾಗೂ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರು, ಬೆಳ್ತಂಗಡಿ ತಾಲೂಕು ಇವರ ಪ್ರಕಟಣೆ ತಿಳಿಸಿದೆ.