ಜ.24 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ-2020

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.22    ತೋಟಗಾರಿಕೆ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ದ.ಕ ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘ (ರಿ) ಮಂಗಳೂರು, ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಫಲಪುಷ್ಪ ಪ್ರದರ್ಶನ-2020 ಕಾರ್ಯಕ್ರಮ ಜನವರಿ 24 ರಿಂದ 26 ರವರೆಗೆ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ.

ಫಲಪುಷ್ಪ ಪ್ರದರ್ಶನ-2020 ಕಾರ್ಯಕ್ರಮವನ್ನು ಜನವರಿ 24 ರಂದು ಬೆಳಿಗ್ಗೆ 11 ಗಂಟೆಗೆ ಕದ್ರಿ ಉದ್ಯಾನವನದಲ್ಲಿ  ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Also Read  ನಾಳೆ (ಜ. 15) ಸಚಿವ ವಿ. ಸೋಮಣ್ಣ ಜಿಲ್ಲಾ ಪ್ರವಾಸ

error: Content is protected !!
Scroll to Top