ಮಂಗಳೂರು-ಬಳ್ಳಾರಿ-ಮಂಗಳೂರು ಬಸ್ ಪ್ರಾರಂಭ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.22     ಕೆಎಸ್‍ಆರ್ ಟಿಸಿ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ವಿಭಾಗದಿಂದ ಮಂಗಳೂರು-ಬಳ್ಳಾರಿ-ಮಂಗಳೂರು ಮಾರ್ಗದಲ್ಲಿ ರಾಜಹಂಸ ಸಾರಿಗೆಯನ್ನು ಜನವರಿ 23  ರಂದು ಕಾರ್ಯಾಚರಿಸಲಾಗುತ್ತಿದ್ದು, ಸದರಿ ಬಸ್‍ಗಳ  ಕಾರ್ಯಾಚರಣೆ ಸಮಯದ ವಿವರ ಇಂತಿವೆ.

ಮಂಗಳೂರು-ಬಳ್ಳಾರಿ-ಮಂಗಳೂರು ರಾಜಹಂಸ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಟು ಉಡುಪಿ-ಕುಂದಾಪುರ-ತೀರ್ಥಹಳ್ಳಿ-ಶಿವಮೊಗ್ಗ-ಚನ್ನಗಿರಿ -ಹೊಳಲ್ಕೆರೆ-ಚಳ್ಳೆಕೆರೆ-ಚಿತ್ರದುರ್ಗ ಮಾರ್ಗವಾಗಿ ಬಳ್ಳಾರಿ ಬೆಳಿಗ್ಗೆ 6.30 ಗಂಟೆಗೆ  ತಲುಪಲಿದೆ. ಅದೇ ರೀತಿ ಬಳ್ಳಾರಿಯಿಂದ ಸಂಜೆ 5.35 ಗಂಟೆಗೆ ಹೊರಟು ಮಂಗಳೂರಿಗೆ ಬೆಳಿಗ್ಗೆ 5 ಗಂಟೆಗೆ ತಲುಪುವುದು. ಸದರಿ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆಎಸ್‍ಆರ್ ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.

Also Read  ಕಡಬ: ಮತ್ತೇ ಅರಣ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಕಾಣ ಸಿಕ್ಕ ಒಂಟಿ ಸಲಗ

error: Content is protected !!
Scroll to Top