ತುಳುನಾಡ ಸಿರಿ ಮದಿಪು – 2020

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.22    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ  ಮಹಾವೀರ ಕಾಲೇಜು, ಮೂಡಬಿದ್ರೆ, ಹಳೆ ವಿದ್ಯಾರ್ಥಿ ಸಂಘ ಮಹಾವೀರ ಕಾಲೇಜು ಮತ್ತು ತುಳುಕೂಟ ಮೂಡಬಿದ್ರೆ ಸಹಯೋಗದೊಂದಿಗೆ ಕಾಲೇಜಿನಲ್ಲಿ ತುಳುನಾಡ ಸಿರಿ “ಮದಿಪು” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಜನವರಿ 24 ರಂದು ಬೆಳಿಗ್ಗೆ 9.15  ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಅಧ್ಯಕ್ಷತೆಯನ್ನು ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ವಹಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹಾವೀರ ಕಾಲೇಜಿನ ಪ್ರಾಚಾರ್ಯ ಪ್ರೊ. ಹೆಚ್. ಚಂದ್ರಶೇಖರ್ ದೀಕ್ಷಿತ್, ಮೂಡಬಿದ್ರೆಯ ತುಳುನಾಡ ಸೇನೆ(ರಿ) ಸ್ಥಾಪಕ ಅಧ್ಯಕ್ಷ ಸುರೇಶ್ ಶೆಟ್ಟಿ, ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತು ತುಳು ಮತ್ತು ಕನ್ನಡ ಸಿನೆಮಾ ನಿರ್ದೇಶಕ ಕಿಶೋರ್ ಮೂಡಬಿದ್ರೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 4.30 ಗಂಟೆಗೆ ನಡೆಯುವ  ಸಮಾರೋಪ ಸಮಾರಂಭದಲ್ಲಿ ಮಹಾವೀರ ಕಾಲೇಜಿನ ಪ್ರಾಚಾರ್ಯ ಪ್ರೊ. ಹೆಚ್. ಚಂದ್ರಶೇಖರ್ ದೀಕ್ಷಿತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದ್ರೆ ವಿಧಾನಸಭಾ ಶಾಸಕ ಉಮಾನಾಥ ಕೋಟ್ಯಾನ್ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ  ರಿಜಿಸ್ಟ್ರಾರ್ ಪ್ರಕಟಣೆ ತಿಳಿಸಿದೆ.

Also Read  ಬೆಳ್ಳಾರೆ: ಅಂಗಡಿಗೆ ನುಗ್ಗಿ ನಗದು ಕಳ್ಳತನ ➤ ಆರೋಪಿ ಪೊಲೀಸ್‌ ವಶಕ್ಕೆ

error: Content is protected !!
Scroll to Top