ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ ಶಕ್ತಿ ಫೆಸ್ಟ್ 2020

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.22    ಇಲ್ಲಿನ ಶಕ್ತಿ ವಸತಿ ಶಾಲೆಯವರು ಜನವರಿ 31 ಹಾಗೂ ಫೆಬ್ರವರಿ 01 ರಂದುಎರಡು ದಿನಗಳ ಕಾಲ ಶಕ್ತಿ ಫೆಸ್ಟ್ 2020ನ್ನು ಹಮ್ಮಿಕೊಂಡಿದ್ದಾರೆ. ದ.ಕ ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಅಂತರ್ ಶಾಲಾ ಸ್ಪರ್ಧೆಗಳು ಎರಡು ವರ್ಗ ನಾಲ್ಕು ವಿಭಾಗಗಳಲ್ಲಿ ನಡೆಯಲಿವೆ ವರ್ಗ – 01 ವಿಭಾಗ I- ತರಗತಿ 1,2, ಹಾಗೂ ವಿಭಾಗ II –ತರಗತಿ 3, 4, ವರ್ಗ– 02. ವಿಭಾಗ III- ತರಗತಿ 5,6,7, ಹಾಗೂ ವಿಭಾಗ IV -ತರಗತಿ 8, 9, 10.


ವಿಭಾಗI, II ರಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಹಾಡು, ನಟನೆ, ಕತೆ ಹೇಳುವುದು, ಚಿತ್ರಕಲೆ, ಬಣ್ಣ ಹಾಕುವುದು, ದೇಶಭಕ್ತಿಗೀತೆ, ಛದ್ಮ ವೇಷ ಸ್ಪರ್ಧೆಗಳು ನಡೆಯಲಿವೆ.
ವಿಭಾಗ III,IV ರಲ್ಲಿಇಂಗ್ಲೀಷ್, ಕನ್ನಡ, ಹಿಂದಿ ಭಾಷಣ ಸ್ಪರ್ಧೆ, ಜನಪದ ಹಾಡು(ಸಮೂಹ), ಚಿತ್ರಕಲೆ, ರಸಪ್ರಶ್ನೆ, ಸ್ಪೆಲ್‍ಬೀ, ಹೂ ಜೋಡಣೆ, ಛದ್ಮವೇಷ, ಸಾಂಸ್ಕೃತಿಕ ವೈವಿಧ್ಯ, ದಾಸರ ಪದಗಳು (ಸಮೂಹ), ವಾದ್ಯ ಸಂಗೀತ, ಸಾಂಪ್ರದಾಯಿಕ ರಂಗೋಲಿ, ಜನಪದ ಕುಣಿತ(ಸಮೂಹ) ಸ್ಪರ್ಧೆಗಳು ನೆಡಯಲಿವೆ. ವಿಜೇತರಿಗೆ ನಗದು ಬಹುಮಾನ, ಪ್ರಶಂಸಾ ಪತ್ರ ಹಾಗೂ ಅತ್ಯಧಿಕ ಅಂಕಗಳನ್ನು ಗಳಿಸಿದ ಶಾಲೆಗಳಿಗೆ ಎರಡು ವರ್ಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಫಲಕಗಳನ್ನು ನೀಡಿ ಗೌರವಿಸಲಾಗುವುದು. ಜನವರಿ 28, ನೋಂದಣಿಗೆ ಕೊನೆಯ ದಿನವಾಗಿದೆ ಎಂದು ಶಾಲಾ ಪ್ರಾಚಾರ್ಯೆ ವಿದ್ಯಾಕಾಮತ್ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಶಕ್ತಿ ಫೆಸ್ಟಿನ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು. ಈ ಸಂಧರ್ಭದಲ್ಲಿ ಶಕ್ತಿ ಎಜ್ಯುಕೇಶನ್‍ ಟ್ರಸ್ಟ್ ನ ಪ್ರಧಾನ ಸಲಹೆಗಾರ ರಮೇಶ್ ಕೆ ಹಾಗೂ ಅಭಿವೃದ್ಧಿ ಅಧಿಕಾರಿ ಪ್ರಕ್ಯಾತ್‍ ರೈ ಉಪಸ್ಥಿತರಿದ್ದರು.

Also Read  ಸಂಘಪರಿವಾರವು ವಿದ್ಯಾರ್ಥಿಗಳ ಮೂಲಕ ಕೋಮುಗಲಭೆ ನಡೆಸಲು ಸಂಚು ರೂಪಿಸುತ್ತಿದೆ ➤ ಆರೋಪಿಗಳ ಬಂಧನವಾಗದೇ ಇದ್ದಲ್ಲಿ "ಪುತ್ತೂರು ಚಲೋ"- ಕ್ಯಾಂಪಸ್ ಫ್ರಂಟ್

Nk Kukke

error: Content is protected !!
Scroll to Top