ಸ್ವ ಉದ್ಯೋಗ – ಬ್ಯಾಂಕ್ ಮೂಲಕ ಸಾಲ/ಸಹಾಯಧನ  ಸೌಲಭ್ಯ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21    ದಕ್ಷಿಣ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಪಿ.ಎಂ.ಇ.ಜಿ.ಪಿ. ಯೋಜನೆ ಅಡಿಯಲ್ಲಿ  ಬ್ಯಾಂಕ್ ನಲ್ಲಿ ಸಾಲ ಅಥವಾ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ.


ಯೋಜನೆಯು ಡಿ.ಐ.ಸಿ/ಕೆ.ವಿ.ಐ.ಸಿ/ಕೆ.ವಿ.ಐ.ಬಿ. ಮೂರು ಇಲಾಖೆಯಲ್ಲಿ ಸೌಲಭ್ಯ ಹೊಂದಿದೆ. ಗ್ರಾಮಾಂತರ ಅಭ್ಯರ್ಥಿಗಳಿಗೆ ಸಿ.ಎಂ.ಇ.ಜಿ.ಪಿ. ಯೋಜನೆ ಅಡಿಯಲ್ಲಿ ಡಿ.ಐ.ಸಿ/ಕೆ.ವಿ.ಬಿ ಎರಡು ಇಲಾಖೆಯಲ್ಲಿ ಸೌಲಭ್ಯ ಹೊಂದಿದೆ. ಜಿಲ್ಲೆಯಲ್ಲಿ ಕೆಲವೊಂದು ಅನಧಿಕೃತ ವ್ಯಕ್ತಿಗಳು ತಾವು ಈ ಯೋಜನೆಯ ಕನ್‍ಸಲ್ಟೆಂಟ್ ಎಂದು ನಂಬಿಸಿ ಹಣ ವಸೂಲು ಮಾಡಿ ಜಿಲ್ಲೆಯ ಯುವಜನರಿಗೆ ಮೋಸ ಮಾಡುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಈ ಯೋಜನೆಯಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಆಸಕ್ತರಿರುವ ಯುವಕ / ಯುವತಿಯರು ಅಂಶಗಳನ್ನು ಗುರುತಿಸಿ ಅರ್ಜಿ ಸಲ್ಲಿಸಬೇಕು. ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ, ಅರ್ಜಿ ಸಲ್ಲಿಸಿದ ನಂತರ ನಿಗದಿತ ದಿನಾಂಕದಂದು ಸಂದರ್ಶನ ನಡೆಸಲಾಗುತ್ತದೆ, ಈ ಬಗ್ಗೆ ಅಭ್ಯರ್ಥಿಗಳಿಗೆ ಮುಂಚಿತವಾಗಿ ಸಂದೇಶ (SMS ) ಕಳುಹಿಸಲಾಗುತ್ತದೆ, ಅರ್ಜಿ ಸಲ್ಲಿಕೆಯಾದ ನಂತರ ವಿವಿಧ ಹಂತಗಳ ಪ್ರಗತಿಯನ್ನು ಆನ್‍ಲೈನ್‍ನಲ್ಲಿ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಇಂಡಸ್ಟ್ರೀಯಲ್ ಎಸ್ಟೇಟ್, ಯೆಯ್ಯಾಡಿ, ದ.ಕ., ಮಂಗಳೂರು. ದೂರವಾಣಿ ಸಂಖ್ಯೆ 0824-2214021 ಸಂಪರ್ಕಿಸಬೇಕು ಎಂದು ಜಂಟೀ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group