ರಾಷ್ಟ್ರೀಯ ಪೋಷಣ್ ಅಭಿಯಾನ – ಗುತ್ತಿಗೆ ಆಧಾರದಲ್ಲಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21    ರಾಷ್ಟ್ರೀಯ ಪೋಷಣ್ ಅಭಿಯಾನವನ್ನು ಅನುಷ್ಠಾನಗೊಳಿಸಲು ಜಿಲ್ಲಾ ಹಾಗೂ ಯೊಜನಾ ಮಟ್ಟದಲ್ಲಿ ಮಂಜೂರಾಗಿರುವ 16 ವಿವಿಧ ಹುದ್ದೆಗಳನ್ನು ನೇರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು  21 ರಿಂದ 35 ವರ್ಷ ವಯಸ್ಸಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಪ್ರಾರಂಭ ದಿನ ಜನವರಿ 20 ಹಾಗೂ ಕೊನೆಯ ದಿನ ಜನವರಿ 27 ಆಗಿರುತ್ತದೆ.


ಹುದ್ದೆಗಳ ವಿವರ ಇಂತಿವೆ:  ಉಪನಿರ್ದೇಶಕರ ಕಚೇರಿ, ಮಂಗಳೂರು- ಜಿಲ್ಲಾ ಸಂಯೋಜಕರು, ಹುದ್ದೆಗಳ ಸಂಖ್ಯೆ-1  ಜಿಲ್ಲಾ ಯೋಜನಾ ಸಹಾಯಕರು, ಹುದ್ದೆಗಳ ಸಂಖ್ಯೆ-1
ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಪುತ್ತೂರು, ಬಂಟ್ವಾಳ, ವಿಟ್ಲ, ಸುಳ್ಯ, ಬೆಳ್ತಂಗಡಿ- ಬ್ಲಾಕ್ ಸಂಯೋಜಕರು, ಹುದ್ದೆಗಳ ಸಂಖ್ಯೆ-7, ಬ್ಲಾಕ್ ಯೋಜನಾ ಸಹಾಯಕರು- ಹುದ್ದೆಗಳ ಸಂಖ್ಯೆ- 7  ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ದೂರವಾಣಿ ಸಂಖ್ಯೆ: 0824-2451254 ನ್ನು ಸಂಪರ್ಕಿಸಲು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಜ.22 ಕ್ಕೆ ಟೈಲರ್ಸ್ ಕೊಗ್ಗ ಜೋಗಿಗಂಗಮ್ಮ ಸ್ಮರಣಾರ್ಥದತ್ತಿ ನಿಧಿ ಕಾರ್ಯಕ್ರಮ

error: Content is protected !!
Scroll to Top