ಸಾ. ಶಿಕ್ಷಣ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21   ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ  ದ.ಕ ಜಿಲ್ಲಾ ಶಾಖೆ ವತಿಯಿಂದ, ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ ಜಿಲ್ಲೆಯ ಉಪನಿರ್ದೇಶಕರಾಗಿ (ಆಡಳಿತ) ಕರ್ತವ್ಯಕ್ಕೆ ಹಾಜರಾದ ಮಲ್ಲೇಸ್ವಾಮಿ ಇವರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಪರವಾಗಿ ಹೂಗುಚ್ಛವನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಸಂಘಟನಾ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಶರ್ಲಿ ಸುಮಾಲಿನಿ, ರಾಜ್ಯ ಪರಿಷತ್ ಸದಸ್ಯ, ದ.ಕ ಜಿಲ್ಲೆ ಉಪಾಧ್ಯಕ್ಷ ದೇವದಾಸ್, ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ಕ್ರೀಡಾ ಕಾರ್ಯದರ್ಶಿ  ಲಿಲ್ಲಿ ಪಾಯಾಸ್, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಾಣಿ, ಮುರಳಿ, ನೌಕರರ ಸದಸ್ಯರಾದ ಯೋಗೀಶ್, ಪ್ರತಿಭಾ ಹಾಜರಿದ್ದರು.

Also Read  ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಎಚ್.ವಿ. ಶಿವಾನಂದ ಶೇಟ್ ವಿಧಿವಶ

error: Content is protected !!
Scroll to Top