ಆಲಂಕಾರು: ಕ್ರೀಡಾಕೂಟದ ಉದ್ಟಾಟನೆ

(ನ್ಯೂಸ್ ಕಡಬ) newskadaba.com, ಕಡಬ, ಜ.21    ಸರಕಾರಿ ಶಾಲೆಗಳ ಉಳಿವಿಗೆ ಗ್ರಾಮದ ಜನತೆಯ ಜೊತೆಗೆ ಪೂರ್ವ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಎಂದು ವಿಶ್ರಾಂತ ಪ್ರಾಂಶುಪಾಲ ಎಸ್ ದುಗ್ಗಪ್ಪ ಗೌಡ ನುಡಿದರು. ಅವರು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಪ್ರಯುಕ್ತ ನಡೆದ ಪೂರ್ವ ವಿದ್ಯಾರ್ಥಿಗಳ ಹಾಗೂ ಪೊಷಕರ ಕ್ರೀಡಾಕೂಟವನ್ನು ಉದ್ಟಾಟಿಸಿ ಮಾತನಾಡಿದರು.


ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಸರಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಆದರೆ ಜನತೆಯ ಚಿತ್ತ ಖಾಸಗಿ ಶಾಲೆಗಳತ್ತ ಸೆಳೆದಿರುವುದು ವಿಷಾದನೀಯ ಸಂಗತಿಯಾಗಿದೆ. ದುಬಾರಿ ಶಾಲಾ ಶುಲ್ಕ ಪಾವತಿಸಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಹೆತ್ತವರ ಒಂದು ಪ್ರತಿಷ್ಠೆಯಂತಾಗಿದೆ. ಈ ಕಾರಣದಿಂದಾಗಿಯೇ ಸರಕಾರಿ ಶಾಲೆಗಳು ಮುಚ್ಚುವ ಭೀತಿಯನ್ನು ಎದುರಿಸುವಂತಾಗಿದೆ ಎಂದರು. ಶತಮಾನೋತ್ಸವ ಕಾರಣದ ಮೂಲಕ ಮತ್ತೊಮ್ಮೆ ಪೂರ್ವ ವಿದ್ಯಾರ್ಥಿಗಳ ಸಮಾವೇಶವಾಗುತ್ತಿರುವುದು ಶಾಲಾ ಬೆಳವಣಿಗೆಗೆ ಪೂರಕವಾಗಲಿ, ಸಂಘಟಿತ ಮನೋಭಾವನೆಯ ಮೂಲಕ ಕ್ರೀಡಾ ಯಶಸ್ಸಿನಂತೆ ಸರಕಾರಿ ಶಾಲೆಗಳ ಉಳಿವಿಗೆ ನಾವೆಲ್ಲರು ಸಂಘಟಿತರಾಗೋಣ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ.ಕೆ, ಗೌರವಾಧ್ಯಕ್ಷ ವಿಠಲ್ ರೈ, ಕಾರ್ಯದರ್ಶಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಸಂಚಾಲಕ ಕೇಶವ ಗೌಡ ಆಲಡ್ಕ, ತಾ.ಪಂ ಸದಸ್ಯೆ ತಾರಾ ಕೇಪುಳು, ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾನಂದ ಆಚಾರ್ಯ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಅಬೂಬಕ್ಕರ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ನಡುಮನೆ, ಸಿಆರ್ ಪಿ ಪ್ರದೀಪ್ ಬಾಕಿಲ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ರವಿ ನೆಕ್ಕಿಲಾಡಿ ಸ್ವಾಗತಿಸಿದರು. ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರರೂಪಿಸಿದರು. ಮುಖ್ಯಗುರು ಕೆ.ಪಿ.ನಿಂಗರಾಜು ವಂದಿಸಿದರು. ಬಳಿಕ ಪೊಷಕರಿಗೆ ಹಾಗೂ ಪೂರ್ವ ವಿದ್ಯಾರ್ಥಿಗಳಿಗಾಗಿ ಕಬಡ್ಡಿ, ವಾಲಿಬಾಲ್, ತ್ರೋಬಾಲ್, ಗುಂಡು ಎಸೆತ, 100ಮೀ ಓಟ, ಮೊದಲಾದ ಆಟೋಟ ಸ್ಪರ್ಧೆಗಳು ಸಂಜೆವರೆಗೆ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

Also Read  ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾ ಕೂಟ ಜ್ಞಾನೋದಯ ಬೆಥನಿಗೆ ಅವಳಿ ಸಮಗ್ರ  ಪ್ರಶಸ್ತಿ

error: Content is protected !!
Scroll to Top