ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಮುಂಡಗೋಡ, .25, ಗಣೇಶ ಚತುರ್ಥಿಯ ಮುನ್ನಾದಿನ ಹಬ್ಬದ ಸಂಭ್ರಮದಲ್ಲಿ ಇರಬೇಕಿದ್ದ ನವ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಬಾಚಣಕಿ ಜಲಾಶಯದಲ್ಲಿ ನಡೆದಿದೆ.

ಯೋಗೀಶ್ ಮತ್ತು ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಹುಬ್ಬಳ್ಳಿಯ ಹೋಸೂರು ಮೂಲದವರಾದ ಇವರು ಕಾರಿನ ಮೂಲಕ ಮುಂಡಗೋಡದ ಬಾಚಣಿಕೆ ಜಲಾಶಯಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗಳ ಸಾವಿಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಡಿಕೊಳ್ಳುವ ಪೂರ್ವದಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ಸಿಕ್ಕಿದೆ. ಡೆತ್’ನೋಟ್ ನಲ್ಲಿ ತಮ್ಮಿಬ್ಬಿರ ಸಾವಿಗೆ ತಾವೇ ಕಾರಣರು ಎಂದು ಬರೆದಿಟ್ಟು ನೇಣು ಬಿಗಿದುಕೊಂಡಿರುವುದು ತಿಳಿದುಬಂದಿದೆ. ಇಬ್ಬರೂ ಬೇರೆ ಬೇರೆ ಸಮುದಾಯರಾಗಿದ್ದ ಇವರು ಎರಡು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಈ ಪ್ರಕರಣವು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Also Read  ಅಪರಾದಿಗಳನ್ನು ಗಲ್ಲಿಗೇರಿಸುವುದು ಬಿಟ್ಟು ಮರಣದಂಡನೆಗೆ ಅನ್ಯ ಮಾರ್ಗ ಹುಡುಕಿ ➤ ಸುಪ್ರೀಂ ಕೋರ್ಟ್

 

error: Content is protected !!
Scroll to Top