ಜೆಸಿಐ ಅಲಂಕಾರಿನ ವತಿಯಿಂದ “ಚೈತನ್ಯ”-ರಾಷ್ಟ್ರೀಯ ಯುವ ದಿನದ ಆಚರಣೆ

(ನ್ಯೂಸ್ ಕಡಬ) newskadaba.com, ಕಡಬ, ಜ.20    ಜೆಸಿಐ ಘಟಕ ಆಲಂಕಾರು ಇದರ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು “ಚೈತನ್ಯ” ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ಯುವ ದಿನದ ಆಚರಣೆಯನ್ನು ಆಚರಿಸಲಾಯಿತು.

ಕುಂತೂರು ಪದವು ಸಂತಜಾರ್ಜ್ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಮುಖ್ಯಗುರು ಹರಿಶ್ಚಂದ್ರ ಕೆ ಉದ್ಟಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಶಾಲೆಯ ಅಧ್ಯಾಪಕಿಯಾದ ಭುವನೇಶ್ವರಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ವಾಮಿ ವಿವೆಕಾನಂದರ ಚಿಂತನೆಗಳ ಬಗ್ಗೆ ತಿಳಿ ಹೇಳಿದರು. ಈ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಆಗಮಿಸಿದ್ದ ಜೆಸಿಐ ವಲಯ ತರಬೇತುದಾರರಾದ ಜೆ.ಏಫ್.ಪಿ ಹೇಮಲತಾ ಪ್ರದೀಪ್‍ರವರು ಯುವ ಜಾಗೃತಿಯ ಕುರಿತಂತೆ ತರಬೇತಿ ನೀಡಿದರು. ಅವರು ತಮ್ಮ ತರಬೇತಿಯಲ್ಲಿ, ರಾಷ್ಟ್ರ ಕಟ್ಟುವಲ್ಲಿ ಯುವಕರ ಪಾತ್ರ ಹಿರಿದು. ಯುವ ಮನಸ್ಸುಗಳು ಕಾರ್ಯಪ್ರವೃತವಾದಲ್ಲಿ ಮುಂದಿನ ಭಾರತ ವಿಶ್ವದ ಗೌರವಕ್ಕೆ ಭಾಜನವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿ ಪ್ರಯತ್ನ ಇರಬೇಕು ಎಂದು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕಿಯಾದ ವಿಜಯಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಸಿಐ ಅಲಂಕಾರು ಘಟಕದ ಅಧ್ಯಕ್ಷರಾದ ಜೆಸಿ ಸತೀಶ್ ಜಿ ಆರ್ ಪ್ರಾಸ್ತಾವಿಕವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Also Read  ಇಂದು ಪ್ರಿಯಾಂಕಾ ಗಾಂಧಿ ಸಂಸದರಾಗಿ ಪ್ರಮಾಣ ವಚನ ಸ್ವೀಕಾರ

Nk Kukke

error: Content is protected !!
Scroll to Top