ಭುವನೇಶ್ ಬುಡಲೂರು ಸಿ.ಎ ಪರೀಕ್ಷೆ ತೇರ್ಗಡೆ

(ನ್ಯೂಸ್ ಕಡಬ) newskadaba.com, ಕಡಬ, ಜ.18  ಕಡಬ ತಾಲೂಕು ಕೊೈಲ ಗ್ರಾಮದ ಭುವನೇಶ್ ಬುಡಲೂರು 2019 ನೇ ಸಾಲಿನ ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ , ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ , ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಪದವಿ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ 2014 ರಿಂದ ಬೆಂಗಳೂರಿನ ಉಪೇಂದ್ರ ಮತ್ತು ಕಂಪನೆಯಲ್ಲಿ ಸಿ ಎ ತರಬೇತಿ ಪಡೆದು 2019 ರಲ್ಲಿ ಭಾರತೀಯ ಲೆಕ್ಕ ಪರಿಶೋಧನ ಸಂಸ್ಥೆ ನಡೆಸುವ ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬುಡಲೂರು ಲಕ್ಷ್ಮಣ ಗೌಡ ಮತ್ತು ಮೋಹಿನಿ ದಂಪತಿ ಪುತ್ರ.

Also Read  ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು

error: Content is protected !!
Scroll to Top