ಬಿಹಾರ ಮೂಲದ ಮೂರು ಬಾಲಕಾರ್ಮಿಕರ ರಕ್ಷಣೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.18    ಜನವರಿ 16 ರಂದು ಕಾರ್ಮಿಕ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ತಂಡವು ಹೊೈಗೆ ಬಜಾರ್, ಮಂಗಳೂರು ಇಲ್ಲಿಗೆ ಅನಿರೀಕ್ಷಿತ ಭೇಟಿ ನೀಡಿ, ಮೀನು ಸಂಸ್ಕರಣಾ ಘಟಕದಲ್ಲಿ ಫಿಶ್ ಕಟ್ಟಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಮೂರು ಬಾಲಕಾರ್ಮಿಕರನ್ನು ಕೆಲಸದಿಂದ ಬಿಡಿಸಿ, ಪುನರ್ವಸತಿಗೊಳಿಸಲಾಯಿತು.

ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ತಂಡದಲ್ಲಿ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೊ,  ಹಿರಿಯ ಕಾರ್ಮಿಕ ನಿರೀಕ್ಷಕರು ರಾಜ ಶೇಖರ ರೆಡ್ಡಿ,  ವಿರೇಂದ್ರ ಕುಂಬಾರ, ಮಂಗಳೂರು ದಕ್ಷಿಣ ಬಿ.ಆರ್.ಪಿ, ಗೀತಾ ಶಾನ್‍ಭಾಗ್, ಯೋಜನಾ ನಿರ್ದೇಶಕ ಶ್ರೀನಿವಾಸ ಓ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Also Read  ರೌಡಿಶೀಟರ್ ಕಿಶನ್ ಹತ್ಯೆ ಪ್ರಕರಣ ➤ ಐವರು ಆರೋಪಿಗಳು ಅರೆಸ್ಟ್..!

error: Content is protected !!
Scroll to Top