ಕಟೀಲು ರಸ್ತೆ ಅಭಿವೃದ್ಧಿ- ಸಂಚಾರ ಮಾರ್ಪಾಡು

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.17    ಕಟೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಕ್ಷೇತ್ರಕ್ಕೆ ಬರುವ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸುಗಮ ರಸ್ತೆ ಸಂಚಾರ ನಿಟ್ಟಿನಲ್ಲಿ ಮಂಗಳೂರು-ಬಜಪೆ-ಕಟೀಲು ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದೆ.


ಮಂಗಳೂರಿನಿಂದ ಬಜಪೆ ಮಾರ್ಗವಾಗಿ ಬರುವ ವಾಹನಗಳು ಶಿಬರೂರು ದ್ವಾರದ ಬಳಿ ಎಡಕ್ಕೆ ತಿರುಗಿ ಶಿಬರೂರು ಜಂಕ್ಷನ್ -ಕಿನ್ನಿಗೋಳಿ – ಮೂರು ಕಾವೇರಿ ಮೂಲಕ ಕಟೀಲಿಗೆ ಆಗಮಿಸಬಹುದು. ಕಟೀಲಿನಿಂದ ಮಂಗಳೂರು ಹೋಗುವ ರಸ್ತೆ ಸಂಚಾರದಲ್ಲಿ ಯಾವುದೇ ಮಾರ್ಪಾಡಿಲ್ಲ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

Also Read  ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ಎಂ.ಪಿ.ಎಲ್.ಎಂ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮ

error: Content is protected !!
Scroll to Top