ಪ್ರಜ್ಞಾ ಸಲಹಾ ಕೇಂದ್ರ  – ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.17  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐ.ಸಿ.ಪಿ.ಎಸ್ ಪ್ರಾಯೋಜಿತ ಪ್ರಜ್ಞಾ ಅರ್ಹ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾಸಿಕ ನಿಗದಿತ ಗೌರವಧನ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.


ಅಧೀಕ್ಷಕರ ಹುದ್ದೆ ರೂ. 25,000 (ಎಂ.ಎಸ್.ಡಬ್ಲ್ಯೂ ಮೆಡಿಕಲ್ ಎಂಡ್ ಸೈಕ್ಯಾಟ್ರಿಕ್), ಆಪ್ತ ಸಮಾಲೋಚಕರ ಹುದ್ದೆ ರೂ. 17,500 (ಎಂ.ಎಸ್.ಡಬ್ಲ್ಯೂ ಮೆಡಿಕಲ್ ಎಂಡ್ ಸೈಕ್ಯಾಟ್ರಿಕ್), ಗೃಹಮಾತೆ ಹುದ್ದೆ ರೂ.11,000 (ಪದವೀದರರು), ಹೌಸ್ ಕೀಪರ್ ಹುದ್ದೆ ರೂ. 6000 (7ನೇ ತರಗತಿ), ವಿದ್ಯಾರ್ಹತೆ ಹೊಂದಿರುವ ಮತ್ತು ಪ್ರಜ್ಷಾ ಸ್ವಾಧಾರ ಗೃಹಕ್ಕೆ ಚೌಕಿದಾರ್ ಹುದ್ದೆಗೆ ರೂ. 5000 ಗೌರವಧನ (8ನೇ ತರಗತಿ)ಆಧಾರದಲ್ಲಿ  18 ರಿಂದ 38 ವರ್ಷ ವಯೋಮಿತಿಯುಳ್ಳ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಸಲ್ಲಿಸಲು ಕೊನೆಯ ದಿನ ಜವನರಿ 21. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಪ್ರಜ್ಞಾ ಸಲಹಾ ಕೇಂದ್ರ, ಫಳ್ನೀರ್ ರೋಡ್, ಕಂಕನಾಡಿ, ಮಂಗಳೂರು ದೂರವಾಣಿ ಸಂಖ್ಯೆ- 0824-2432682 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಉಡುಪಿ: ತಂದೆಯನ್ನು ಕೊಂದ ಮಗನಿಗೆ ಮೂರು ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ !

Nk Kukke

error: Content is protected !!
Scroll to Top