ನೂಜಿಬೈಲ್ ದೈವಸ್ಥಾನ: ಜಾತ್ರೆ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com, ಕಡಬ, ಜ.16    ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಮಾಲೋಚನಾ ಸಭೆ ದೈವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.


ಸಭೆಯಲ್ಲಿ ಜಾತ್ರೋತ್ಸವದ ಪೂರ್ವ ಸಿದ್ಧತಾ ತಯಾರಿ, ಕೆಲಸ ಚಟುವಟಿಕೆ, ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಆಡಳಿತ ಸಮಿತಿಗೆ ನಿಕಟಪೂರ್ವ ಸಮಿತಿಯವರು ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದರು. ನಿಕಟಪೂರ್ವಾಧ್ಯಕ್ಷ ರಾಮಚಂದ್ರ ಗೌಡ ಎಳುವಾಳೆ, ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಶ್ರೀಧರ ಗೌಡ ಗೋಳ್ತಿಮಾರ್, ಪ್ರಮುಖರಾದ ವಿಜಯಕುಮಾರ್ ಕೇಪುಂಜ, ಡೀಕಯ್ಯ ಗೌಡ ಪಾಲೆತ್ತಡಿ, ಲಿಂಗಪ್ಪ ಗೌಡ ಬಾಂತಾಜೆ, ಸೇರಿದಂತೆ ಆಡಳಿತ ಸಮಿತಿ ಪದಾಧಿಕಾರಿಗಳು, ಸದಸ್ಯರು, ಉತ್ಸವ ಸಮಿತಿಯವರು, ಊರ ಭಕ್ತರು ಉಪಸ್ಥಿತರಿದ್ದರು. ರಜಿತಾ ಪದ್ಮನಾಭ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಬಾಲಕೃಷ್ಣ ಗೌಡ ವಾರ್ಷಿಕ ವರದಿ ವಾಚಿಸಿದರು.

Also Read  ಬೆಳಂದೂರು ಕಾಲೇಜಿಗೆ ಕಾಣಿಯೂರು ಶ್ರೀ ಭೇಟಿ

error: Content is protected !!
Scroll to Top