ವಿವೇಕಾನಂದ ಯುವಕ ವೃಂದ ರಿ. ಕೌಡಿಚ್ಚಾರು ಅರಿಯಡ್ಕ ➤ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

(ನ್ಯೂಸ್ ಕಡಬ) newskadaba.com, ಕೌಡಿಚ್ಚಾರ್, ಜ.16    ದಿನಾಂಕ 12 – 01 – 2020 ರಂದು ಕೌಡಿಚ್ಚಾರ್ ಶ್ರೀ ಕೃಷ್ಣ ಭಜನಾ ಮಂದಿರದ ಸಭಾ ಭವನದಲ್ಲಿ ವಿವೇಕಾನಂದ ಯುವಕ ವೃಂದದ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನ, ವಿವೇಕಾನಂದ ಜಯಂತಿ ನಡೆಯಿತು.

ಕಾರ್ಯಕ್ರಮ ವನ್ನು ದೀಪ ಪ್ರಜ್ವಲಿಸುದರ ಮುಖಾಂತರ ಸಂಘದ ಗೌರವ ಸಲೆಹೆಗಾರರಾದ ಬಾಲಕೃಷ್ಣ ಕುಲಾಲ್ ಚಾಲನೆ ಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಂಘದ ಗೌರವಾಧ್ಯಕ್ಷರಾದ ದುರ್ಗಾಪ್ರಸಾದ್ ಕುತ್ಯಾಡಿ ಪುಷ್ಪಾರ್ಚನೆ ಮಾಡಿ, ಮಾತಾಡಿ ಈ ದೇಶದ ಪ್ರತಿಯೊಬ್ಬ ತರುಣರು ಏಕ ಮನೋಭಾವದಿಂದ ಬದುಕಿದರೆ ವಿವೇಕಾನಂದರ ತತ್ವ ಆದರ್ಶಕ್ಕೆ ಬೆಲೆ ಸಿಕ್ಕಿದಂತಾಗುತ್ತೆ ಎಂದರು. ನಂತರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ದೀಪಕ್ ಕುಲಾಲ್ ಮಾತನಾಡಿ ವಿವೇಕಾನಂದರ ಜೀವನ ಹಾಗೂ ಮೌಲ್ಯಗಳಲ್ಲಿನ  ಉತ್ತಮ ಸಂದೇಶ, ಸನಾತನ ಹಿಂದೂ ಧರ್ಮವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮೀಜಿ ಗೆ ಸಲ್ಲುತ್ತದೆ ಎಂದರು. ಕಾರ್ಯಕ್ರಮವನ್ನು ಮನೀಶ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಚರಣ್ ರಾಜ್ ಎಂ ಡಿ. ಸ್ವಾಗತಿಸಿ, ನಿರೂಪಿಸಿದರು. ಸಂಘದ ಅಧ್ಯಕ್ಷರಾದ ವಸಂತ ಕುಲಾಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂತೋಷ್ ಮಣಿಯಾಣಿ ಕುತ್ಯಾಡಿ, ಸಾಂತಪ್ಪ ಕುಲಾಲ್ ಕೌಡಿಚ್ಚಾರ್, ಉದಯ ಕುಮಾರ್ ಆಕಾಯಿ, ಹರಿಪ್ರಸಾದ್ ಗೌಡ ಮಾವಿಲಕೊಚ್ಚಿ, ಶ್ರೀಶ ಯಾದವ್ ಮಾವಿಲಕೊಚ್ಚಿ, ಯೋಗೀಶ್ ಕೌಡಿಚ್ಚಾರ್ ಸಹಕರಿಸಿದರು.

Also Read  ಕಳಂಜಕ್ಕೆ ಬಂತು ಹೆಬ್ಬಾವು ➤ ಗ್ರಾಮಸ್ಥರ ಸಹಕಾರದಿಂದ ಬೇಂಗಮಲೆ ಕಾಡಿಗೆ

error: Content is protected !!
Scroll to Top