ನೂಜಿಬೈಲ್ ದೈವಸ್ಥಾನದಲ್ಲಿ ಮಕರ ಸಂಕ್ರಾಂತಿ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com, ಕಡಬ, ಜ.15    ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಮಂಗಳವಾರ ನಡೆಯಿತು.


ಮದ್ಯಾಹ್ನ ಮಹಾಪೂಜೆ, ಸಂಕ್ರಾಂತಿ ವಿಶೇಷ ಪ್ರಾರ್ಥನೆ ನಡೆದು ಬಳಿಕ ಪ್ರಸಾದ ವಿತರಿಸಲಾಯಿತು. ರಾತ್ರಿ ರಂಗ ಪೂಜೆ ನಡೆಯಿತು. ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಹೆಬ್ಬಾರ್ ಪೂಜಾ ವಿಧಾನಗಳನ್ನು ನೆರವೇರಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಗೌಡ, ನಿಯೋಜಿತ ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಪ್ರಮುಖರಾದ ಶ್ರೀಧರ ಗೌಡ ಗೋಳ್ತಿಮಾರ್, ದುಗ್ಗಣ್ಣ ಗೌಡ ಹೊಸಮನೆ, ಸೇರಿದಂತೆ ಆಡಳಿತ ಸಮಿತಿ, ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರ, ಪರ ಊರ ಭಕ್ತರು ಭಾಗವಹಿಸಿದ್ದರು.

Also Read  ಶಿಕ್ಷಣದಿಂದ ಜೀವನ ಮೌಲ್ಯಗಳನ್ನು ಕಲಿಯುವುದು ಅಗತ್ಯ ➤ ಪ್ರೊ. ಪಿ.ವಿ.ಕೃಷ್ಣ ಭಟ್

error: Content is protected !!
Scroll to Top