ನೂಜಿಬೈಲ್: ದೈವಸ್ಥಾನದ ನೂತನ ಜನರೇಟರ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com, ಕಡಬ, ಜ.15     ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ನೂತನ ಜನರೇಟರ್ ನ್ನು ಮಂಗಳವಾರ ಉದ್ಘಾಟಿಸಲಾಯಿತು.

ಸುಮಾರು 2.75 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾದ ನೂತನ ಜನರೇಟರ್ ನ್ನು ದೈವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಹೆಬ್ಬಾರ್ ಉದ್ಘಾಟಿಸಿ, ಪೂಜಾ ವಿಧಿವಿಧಾನ ನೆರವೇರಿಸಿದರು. ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಜನರೇಟರ್ ಚಾಲನೆ ಮಾಡಿದರು. ಆಡಳಿತ ಸಮಿತಿ ನಿಯೋಜಿತ ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಪ್ರಮುಖರಾದ ವಿಜಯಕುಮಾರ್ ಕೇಪುಂಜ, ಬಾಲಕೃಷ್ಣ ಗೌಡ ಉಳಿಪ್ಪು, ದುಗ್ಗಣ್ಣ ಗೌಡ ಹೊಸಮನೆ, ಶ್ರೀಧರ ಗೌಡ ಗೋಳ್ತಿಮಾರ್, ಡೀಕಯ್ಯ ಗೌಡ ಪಾಲೆತ್ತಡಿ, ಲಿಂಗಪ್ಪ ಗೌಡ ಬಾಂತಾಜೆ, ಸೇರಿದಂತೆ ಆಡಳಿತ ಮಂಡಳಿ, ಉತ್ಸವ ಸಮಿತಿ ಪದಾಧಿಕಾರಿಗಳು, ಪರಿಚಾರಕ ವರ್ಗದವರು, ಭಕ್ತಾದಿಗಳು ಉಪಸ್ಥಿತರಿದ್ದರು.

Also Read  ಎಡಮಂಗಲ: ದಲಿತ ಮಹಿಳೆಯೋರ್ವರ ಮನೆ ಧ್ವಂಸ ➤ ಕೃತ್ಯ ನಡೆಸಿದವರನ್ನು ಕೂಡಲೇ ಬಂಧಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ಆಗ್ರಹ

error: Content is protected !!
Scroll to Top