(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಜ.15 ಕೊೈಲ ಗ್ರಾಮದ ಕುದ್ಲೂರು ಮುಬಾರಕ್ ಜುಮಾ ಮಸೀದಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಿನ್ನೆ ಜರುಗಿತು. ನೂತನ ಮದ್ರಸ ಕಟ್ಟಡದ ಶಿಲಾನ್ಯಾಸವನ್ನು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮದ್ರಸ ಕಟ್ಟಡ ಶೀಘ್ರವಾಗಿ ನಿರ್ಮಾಣಗೊಂಡು ಈ ಭಾಗದ ಮಕ್ಕಳ ವಿದ್ಯಾರ್ಜನೆಗೆ ಮತ್ತು ಸಮಾಜಮುಖಿ ಕೆಲಸಗಳಿಗೆ ಇದರ ಪ್ರಯೋಜನ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ಕುದ್ಲೂರು ಮುಬಾರಕ್ ಜುಮಾ ಮಸೀದಿ ಗೌರವಾಧ್ಯಕ್ಷ, ಮುಲ್ಕಿ ಜುಮಾ ಮಸೀದಿ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಮಾತನಾಡಿ ತೀರಾ ಆರ್ಥಿಕವಾಗಿ ಹಿಂದುಳಿದಿರುವ
ಗ್ರಾಮೀಣ ಪ್ರದೇಶವಾಗಿರುವ ಕುದ್ಲೂರುನಲ್ಲಿ ಮಸೀದಿಯ ಜಮಾಅತ್ ಕಮಿಟಿ ಒಳ್ಳೆಯ ಯೋಜನೆಯನ್ನು ಹಾಕಿಕೊಂಡಿದ್ದು, ಇದು ಶೀಘ್ರವಾಗಿ ನಿರ್ಮಾಣವಾಗುವ ನಿಟ್ಟಿನಲ್ಲಿ ಸಹೃದಯಿ ದಾನಿಗಳು ಸಹಾಯಹಸ್ತ ನೀಡಬೇಕು ಎಂದರು. ಕುದ್ಲೂರು ಮುಬಾರಕ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಮರ್ವೇಳ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ನಝೀರ್ ಅಝ್‍ಹರಿ ಬೊಳ್ಮಿನಾರ್, ಕೊಂತೂರು ಮಸೀದಿಯ ಖತೀಬ್ ಮಜೀದ್ ದಾರಿಮಿ, ಹಮೀದ್ ದಾರಿಮಿ ಆತೂರು, ಉಪ್ಪಿನಂಗಡಿ ರೇಂಜ್ ಮದ್ರಸ
ಮೆನೇಜ್‍ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳೇಜಾಲ್, ಯೂಸುಫ್ ಹಾಜಿ ಪೆದಮಲೆ, ಇಸ್ಮಾಯಿಲ್ ತಂಙಳ್, ಆತೂರು ರೇಂಜ್ ಮದ್ರಸ ಮೆನೇಜ್‍ಮೆಂಟ್ ಮತ್ತು ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಪದಾಧಿಕಾರಿಗಳು, ಸ್ಥಳೀಯ ಪರಿಸರದ ಮಸೀದಿ ಖತೀಬ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಮಾಅತ್ ವತಿಯಿಂದ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್‍ರವರನ್ನು ಸನ್ಮಾನಿಸಲಾಯಿತು. ಹಾಗೂ ಹಲವಾರು ವರ್ಷಗಳಿಂದ ಮಸೀದಿ ಅಧ್ಯಕ್ಷರಾಗಿರುವ ಹಾಜಿ ಅಬ್ದುಲ್ ರಹಿಮಾನ್ ಮರ್ವೇಳ್‍ರವರನ್ನು ತಂಙಳ್‍ರವರು ಸನ್ಮಾನಿಸಿದರು. ಕುದ್ಲೂರು ಮುಬಾರಕ್ ಜುಮಾ ಮಸೀದಿ ಖತೀಬ್ ಅಶ್ರಫ್ ರಹ್ಮಾನಿ ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ಕೆ.ವೈ. ವಂದಿಸಿದರು. ಖಜಾಂಚಿ ಅಬ್ದುಲ್ ಖಾದರ್ ಬಿ.ಕೆ., ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಅಶ್ರಫ್ ಕೊರೆಪದವು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.