(ನ್ಯೂಸ್ ಕಡಬ) newskadaba.com ಕಡಬ, ಆ.24, ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ನಿಮಿತ್ತ ಅಷ್ಟಮಂಗಲ ಪ್ರಶ್ನೆ ನಡೆಯುತ್ತಿದ್ದು ಕ್ಷೇತ್ರದಲ್ಲಿ ಅಭಿವೃದ್ದಿಯಾಗಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.
ಕೇರಳ ಹಾಗೂ ಕಾಸರಗೋಡಿನ ಪರವನಡ್ಕ ಜ್ಯೋತಿಷ್ಯರಾದ ಜಯಚಂದ್ರನ್ ರವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲಾಯಿತು. ಪ್ರಶ್ನೆಯಲ್ಲಿ ಕಂಡುಬಂದಂತೆ ತಾಲೂಕಿನಲ್ಲಿಯೇ ಪುರಾತನ ಪ್ರಸಿದ್ದ ದೇವಾಲಯ ಇದಾಗಿದ್ದು ಅತ್ಯುತ್ತಮ ದೇವಾಲಯವನ್ನಾಗಿ ನಿರ್ಮಿಸುವಲ್ಲಿ ಈ ಭಾಗದ ಎಲ್ಲರ ಸಹಕಾರ ಅತೀ ಅಗತ್ಯವಾಗಿದೆ ಎಂದು ಕಂಡುಬಂದಿರುವುದಲ್ಲದೆ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರಮಿಸುವ ಮೂಲಕ ಶ್ರದ್ದಾಭಕ್ತಿಯ ದೇವಾಲಯ ನಿರ್ಮಿಸಲು ಸಹಕರಿಸಬೇಕೆಂದು ಜ್ಯೋತಿಷ್ಯರು ತಿಳಿಸಿದರು.
ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ, ಸುಬ್ರಹ್ಮಣ್ಯ ಬೈಪಡಿತ್ತಾಯ, ದೇವಾಲಯದ ಅರ್ಚಕ ರಮೇಶ್ ಭಟ್ ಕರ್ಮಾಯಿ, ದೇವಸ್ಥಾನದ ಆಡಳಿತ ಮೊಕ್ತೇಸರ ಮರ್ದಾಳ ಬೀಡಿನ ಸನತ್ ಕುಮಾರ್, ಅನುಪ್ ಕುಮಾರ್, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಕಾರ್ಯದರ್ಶಿ ಸುಂದರ ಕರ್ಕೇರ, ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ, ಕಡಬ ಸಿಎ ಬ್ಯಾಂಕಿನ ಅಧ್ಯಕ್ಷ ಸುಂದರ ಗೌಡ ಮಂಡೆಕರ, ನಿರ್ದೇಶಕ ಪೂವಪ್ಪ ಗೌಡ ಐತ್ತೂರು, ಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಧರಣೇಂದ್ರ ಜೈನ್ ಬೆದ್ರಾಜೆ, ಪ್ರಮುಖರಾದ ರಾಧಾಕೃಷ್ಣ ಭಟ್ ಪಿಲಿಮಜಲು, ವಾಸುದೇವ ಬೈಪಡಿತ್ತಾಯ, ಗಣೇಶ್ ಆರ್ಥ್ಮೂವರ್ಸ್‌ನ ಗಣೇಶ್ ಮೇಲಂಟ, ಮುಂಡ್ರಾಡಿ ಗುತ್ತು ಶ್ರೀನಿವಾಸ ರೈ, ಉಕ್ರಪ್ಪ ಗೌಡ ಕೊಲ್ಯ, ತಿರುಮಲೇಶ್ ಕೊಲ್ಯ, ಚಂದ್ರಶೇಖರ ತುಂಬಿಮನೆ, ಗಣೇಶ್ ವೆಂಕಟಹಿತ್ಲು, ರಾಮಚಂದ್ರ ಮಂಡೆಕರ ಮೊದಲಾದವರು ಉಪಸ್ಥಿತರಿದ್ದರು.