(ನ್ಯೂಸ್ ಕಡಬ) newskadaba.com, ಮಂಗಳೂರು, ಜ.15 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಚಿಸುವ ಎಸ್.ಎಸ್.ಎಲ್.ಸಿ. ಅಥವಾ ಐ.ಟಿ.ಐ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಪಾಸಾ ವೃತ್ತಿಗೆ ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್‍ನಲ್ಲಿ ಐ.ಟಿ.ಐ. ತೇರ್ಗಡೆಯಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೂಲ ದಾಖಲಾತಿಗಳೊಂದಿಗೆ ಜನವರಿ 27 ರೊಳಗೆ ವಿಭಾಗೀಯ ನಿಯಂತ್ರಣಾಧಿಕಾರಿ(ನೇಮಕ), ಕ.ರಾ.ರ.ಸಾ.ನಿಗಮ, ಮಂಗಳೂರು ವಿಭಾಗ, ವಿಭಾಗೀಯ ಕಚೇರಿ, ಬಿಜೈ, ಮಂಗಳೂರು ಇಲ್ಲಿ ಅರ್ಜಿ ಸಲ್ಲಿಸಬಹುದು.
ಐ.ಟಿ.ಐ ವಿದ್ಯಾರ್ಹತೆ ಹೊಂದಿದ ಸ್ಥಾನಗಳ ವಿವರ : ಒಂದು ವರ್ಷ ಅವಧಿಯ ಮೆಕ್ಯಾನಿಕ್ ಡಿಸೇಲ್, 51 ಸ್ಥಾನಗಳು, ಮೆಕ್ಯಾನಿಕ್ ಮೋಟರ್ ವೆಹಿಕಲ್, 45 ಸ್ಥಾನಗಳು, ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್ , 8 ಸ್ಥಾನಗಳು, ವೆಲ್ಡರ್ , 7 ಸ್ಥಾನಗಳು, ಮೆಕ್ಯಾನಿಕ್ ಅಟೋ ಎಲೆಕ್ಟ್ರೀಶಿಯನ್ & ಎಲೆಕ್ಟ್ರೋನಿಕ್ಸ್, 5 ಸ್ಥಾನಗಳು, ಪಾಸಾ 13 ಸ್ಥಾನಗಳು ಹೊಂದಿದ್ದು, ಒಟ್ಟು 129 ಸ್ಥಾನಗಳು.
ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ಸ್ಥಾನಗಳ ವಿವರ : 2 ವರ್ಷ ಅವಧಿಯ ಮೆಕ್ಯಾನಿಕ್ ಡಿಸೇಲ್, 13 ಸ್ಥಾನಗಳು, ಮೆಕ್ಯಾನಿಕ್ ಮೋಟರ್ ವೆಹಿಕಲ್ 11 ಸ್ಥಾನಗಳು, 2 ವರ್ಷ ಅವಧಿಯ ಮೋಟಾರ್ ವೆಹಿಕಲ್ ಬಾಡಿ ಬಿಲ್ಡಿರ್ 2 ಸ್ಥಾನಗಳು, ಮೆಕ್ಯಾನಿಕ್ ಅಟೋ ಎಲೆಕ್ಟ್ರೀಶಿಯನ್ & ಎಲೆಕ್ಟ್ರೋನಿಕ್ಸ್ 1 ಸ್ಥಾನಗಳು, 1.3 ವರ್ಷ ಅವಧಿಯ ವೆಲ್ಡರ್ 2 ಸ್ಥಾನಗಳು.ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಕಚೇರಿ, ಕ.ರಾ.ರ.ಸಾ.ನಿಗಮ, ಬಿಜೈ, ಮಂಗಳೂರು ಇವರನ್ನು ಸಂಪರ್ಕಿಸಬಹುದೆಂದು ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾನಿ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.