(ನ್ಯೂಸ್ ಕಡಬ) newskadaba.com, ಮಂಗಳೂರು, ಜ.15 ಇಂದು ಹಾಗೂ ನಾಳೆ ಕರಾವಳಿ ಉತ್ಸವದಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಇಂತಿವೆ.
ಇಂದು ಕದ್ರಿ ಉದ್ಯಾನವನದಲ್ಲಿ: ಸಂಜೆ 6 ಗಂಟೆಯಿಂದ 7.30 ರವರೆಗೆ ಮೈಸೂರು ಎಂ. ನಾಗರಾಜ್, ಮೈಸೂರು ಡಾ. ಎಂ. ಮಂಜುನಾಥ್ ಮತ್ತು ತಂಡದಿಂದ ದ್ವಂದ್ವ ವಯೋಲಿನ್ ವಾದನ, ಸಂಜೆ 7.30 ರಿಂದ 9.30 ಗಂಟೆವರೆಗೆ ಮಿಮಿಕ್ರಿ ಗೋಪಿ, ಟಿವಿ ಮತ್ತು ಸಿನಿಮಾ ಹಾಸ್ಯ ಕಲಾವಿದರು ಮತ್ತು ತಂಡದಿಂದ ಮಿಮಿಕ್ರಿ ಮತ್ತು ಹಳೆಯ ಚಲನಚಿತ್ರ ಗೀತೆಗಳನ್ನು ಹಾಡಲಿದ್ದಾರೆ.
ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 6 ಗಂಟೆಯಿಂದ 7.30 ರವರೆಗೆ ಶ್ರೀ ದುರ್ಗಾ ನೃತ್ಯಾಂಜಲಿ(ರಿ) ಬಂಟ್ವಾಳ ಇವರಿಂದ ನೃತ್ಯ ವೈಭವ, ಸಂಜೆ 7.30 ರಿಂದ 9 ಗಂಟೆವರೆಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಸಾಂಸ್ಕೃತಿಕ ವೈವಿಧ್ಯ, ಕಾರ್ಯಕ್ರಮ ನಡೆಯಲಿದೆ.
ನಾಳೆ ಕದ್ರಿ ಉದ್ಯಾನವನದಲ್ಲಿ: ಸಂಜೆ 5 ಗಂಟೆಯಿಂದ ಜಿಲ್ಲೆಯ ಕಾಜೇಜು ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಕರಾವಳಿ ಯುವ ಉತ್ಸವ ಕಾರ್ಯಕ್ರಮ ನಡೆಯಲಿದೆ.
ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 6 ಗಂಟೆಯಿಂದ 7 ರವರೆಗೆ ಪಿ.ಕೆ ಗಣೇಶ್ ಮತ್ತು ಬಳಗ, ಪುತ್ತೂರು ಇವರಿಂದ ಸ್ಯಾಕ್ಸೋಫೋನ್, ಸಂಜೆ 7 ರಿಂದ ವಿಜಯ ಕುಮಾರ್ ಕೊಡಿಯಾಲ್ ಬೈಲು ಇವರ ನಿರ್ದೇಶನದಲ್ಲಿ ವಿಭಿನ್ನ ಶೈಲಿಯ ಅದ್ದೂರಿ ತುಳು ನಾಟಕ – ಶಿವದೂತೆ ಗುಳಿಗೆ ನಡೆಯಲಿದೆ.