(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಜ.15 ಮದ್ರಸ ಅದೊಂದು ಕಟ್ಟಡ ಎಂದು ಭಾವಿಸದೆ, ಅದು ಸರ್ವ ಧರ್ಮದವರನ್ನು ಬೆಸೆಯುವ, ಸಂತೃಪ್ತಿಗೊಳಿಸುವ, ಸಂಸ್ಕಾರಯುತ ನಾಗರೀಕತೆಯನ್ನು ಅಭಿವ್ಯಕ್ತಗೊಳಿಸುವ ಕೇಂದ್ರವಾಗಿಸಬೇಕು ಎಂದು ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ ಅಧ್ಯಕ್ಷ ಶೈಖುನಾ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಅವರು ಜ. 14ರಂದು ಹಿಮಾಯತುಲ್ ಇಸ್ಲಾಂ ಕಮಿಟಿ, ಖುತುಬಿಯ್ಯಾ ಜುಮಾ ಮಸೀದಿ, ಗಂಡಿಬಾಗಿಲು ಇದರ ಆಶ್ರಯದಲ್ಲಿ ಪ್ರತೀ ತಿಂಗಳು ಆಚರಿಸಿಕೊಂಡು ಬರುತ್ತಿರುವ ಖುತುಬಿಯ್ಯತ್ ನೇರ್ಚೆಯ 46ನೇ ವಾರ್ಷಿಕೋತ್ಸವ ಮತ್ತು ಮದ್ರಸದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ದುವಾಃಶೀರ್ವಚನ ನೀಡಿ ಮಾತನಾಡಿ ಮದ್ರಸಗಳನ್ನು ಕೆಲವರು ಭಯೋತ್ಪಾದನೆ ಕೇಂದ್ರ ಎಂದು ಬಿಂಬಿಸುತ್ತಿದ್ದಾರೆ, ಇದ್ದು ಸಲ್ಲದು ಎಂದ ಅವರು ಮದ್ರಸಗಳು ವಿದ್ಯಾರ್ಥಿಗಳಿಗೆ ಕಲಿಕೆ ನೀಡುವ ಜೊತೆಗೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಎಲ್ಲಾ ಸಮುದಾಯದವರನ್ನು ಆಕರ್ಷಿಸುವ ಕೇಂದ್ರವಾಗಿ ಹೊರ ಹೊಮ್ಮಬೇಕು ಎಂದರು.
ಅಲ್‍ಹಾಜಿ ಅಸ್ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕುನ್ನಂಗೈ, ಕೇರಳ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಲ್ಕಿ ಕೇಂದ್ರ ಜುಮಾ ಮಸೀದಿ ಖತೀಬ್ ಅಲ್‍ಹಾಜಿ ಎಸ್.ಬಿ. ಮುಹಮ್ಮದ್ ದಾರಿಮಿ ಮುಖ್ಯ ಪ್ರಭಾಷಣ ನೀಡಿದರು. ಸಮಾರಂಭದಲ್ಲಿ ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಖತೀಬ್ ನಝೀರ್ ಅಝ್‍ಹರಿ, ಆತೂರು ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಸಿದ್ದಿಕ್ ದಾರಿಮಿ, ಶರೀಫ್ ಫೈಝಿ ಕಡಬ, ಆದಂ ದಾರಿಮಿ ಕರಾಯ, ಇಲ್ಯಾಸ್ ಸಖಾಫಿ ಕೆಮ್ಮಾರ, ದ.ಕ. ಜಿಲ್ಲಾ ಮದ್ರಸ ಮೆನೇಜ್‍ಮೆಂಟ್ ಕಾರ್ಯಾಧ್ಯಕ್ಷ ಎಸ್. ಅಬ್ದುಲ್ ಖಾದರ್ ಹಾಜಿ ಕಡಬ, ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್‍ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳೆಜಾಲ್, ಕಡಬ ರೇಂಜ್ ಮದ್ರಸ ಮೆನೇಜ್‍ಮೆಂಟ್ ಜಿಲ್ಲಾ ಪ್ರತಿನಿಧಿ ಅಶ್ರಫ್ ಶೇಡಿಗುಂಡಿ, ಕೆಮ್ಮಾರ ಶರೀಅತ್ ಕಾಲೇಜು ಅಧ್ಯಕ್ಷ ಎನ್.ಎ. ಇಸಾಕ್, ಗಂಡಿಬಾಗಿಲು ಮಸೀದಿ ಸ್ಥಾಪಕ ಅಧ್ಯಕ್ಷ ಜಿ. ಯೂಸುಫ್ ಹಾಜಿ, ಆತೂರು ಬದ್ರಿಯಾ ಸ್ಕೂಲ್ ಖಜಾಂಚಿ ಬಿ.ಆರ್. ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗಂಡಿಬಾಗಿಲು ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಸೆಯ್ಯದ್ ಅನಸ್ ಅಲ್‍ಹಾದಿ ತಂಙಳ್ ಅಲ್ ಅಝ್‍ಹರಿ ಸ್ವಾಗತಿಸಿ, ಸದರ್ ಮುಅಲ್ಲಿಂ ಮೂಸಾ ಮುಸ್ಲಿಯಾರ್ ವಂದಿಸಿದರು. ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ, ಕಾರ್ಯದರ್ಶಿ ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಆದಂ ಹಾಜಿ ಬಡ್ಡಮೆ, ಜಿ. ಇಸ್ಮಾಯಿಲ್, ಅಬ್ದುಲ್ ರಜಾಕ್ ಮರ್ವೇಲ್, ಯಂಗ್‍ಮೆನ್ಸ್ ಅಧ್ಯಕ್ಷ ಅಬ್ದುಲ್ ಲತೀಫ್, ಝಿಯಾದ್, ಎಸ್.ಪಿ. ಖಲಂದರ್, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಆಶಿಫ್, ರಾಹಿಲ್, ನಿಸಾರ್, ರಫೀಕ್ ಮುಸ್ಲಿಯಾರ್, ಹಾರಿಸ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿ.ಎ. ಮರ್ದಾಳ ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕೋತ್ಸವ ಅಂಗವಾಗಿ ಜ. 12ರಿಂದ ನಡೆದ 2 ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವನ್ನು ಗಂಡಿಬಾಗಿಲು ಕುತುಬಿಯ್ಯಾ ಜುಮಾ ಮಸೀದಿ ಖತೀಬ್ ಖತೀಬ್ ಸೆಯ್ಯದ್ ಅನಸ್ ಅಲ್‍ಹಾದಿ ತಂಙಳ್ ಅಲ್ ಅಝ್‍ಹರಿ ಉದ್ಘಾಟಿಸಿದರು. ತೋಡಾರು ಮಸೀದಿ ಮುದರ್ರಿಸ್ ಎಂ. ಖಾಸಿಂ ದಾರಿಮಿ ಸವಣೂರು ಧಾರ್ಮಿಕ ಉಪನ್ಯಾಸ ನೀಡಿದರು. ಜ. 13ರಂದು ಕಾಸರಗೋಡು ಮೊಗ್ರಾಲ್ ಪುತ್ತೂರು ಮಸೀದಿಯ ಯು.ಕೆ. ಮಹಮ್ಮದ್ ಹನೀಫ್ ನಿಝಾಮಿ ಮುಖ್ಯ ಪ್ರಭಾಷಣ ನೀಡಿದರು.