ಪೌರತ್ವ ವಿರೋಧಿ ಪ್ರತಿಭಟನೆಯನ್ನು ವಿಜಯಗೊಳಿಸಿ – ಜಿಫ್ರಿ ಮುತ್ತುಕೋಯ ತಂಙಳ್

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಜ.15   ಇಂದು ಮಂಗಳೂರು ಬಳಿ ಅಡ್ಯಾರು ಕಣ್ಣೂರುನಲ್ಲಿ ನಡೆಯುವ ಪೌರತ್ವ ವಿರೋಧಿ ಪ್ರತಿಭಟನೆಯನ್ನು ವಿಜಯಗೊಳಿಸಬೇಕು ಎಂದು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಶೈಖುನಾ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಕರೆ ನೀಡಿದರು.


ಅವರು ಮಾತನಾಡುತ್ತಾ ಪೌರತ್ವ ಕಾಯಿದೆ ಸಂವಿಧಾನ ವಿರೋಧಿಯಾಗಿದೆ, ಇದನ್ನು ಸರ್ವ ಧರ್ಮಿಯರೂ ವಿರೋಧಿಸಬೇಕಾಗಿದೆ. ಸಂವಿಧಾನವನ್ನು ರಕ್ಷಿಸಿ, ಉಳಿಸಬೇಕಾದ ಜವಾಬ್ದಾರಿ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯ ಸಂಘಟಿತರಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದರು. ಅಸ್ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್, ಅಸ್ಸಯ್ಯದ್ ಅನಸ್ ಅಲ್‍ಹಾದಿ ತಂಙಳ್, ಎಸ್.ಬಿ. ಮುಹಮ್ಮದ್ ದಾರಿಮಿ ಉಪಸ್ಥಿತರಿದ್ದರು.

Also Read  ಪುತ್ತೂರು: ಮಾನಸಿಕ ಅಸ್ವಸ್ಥನಿಗೆ ಕಾರು ಢಿಕ್ಕಿ

Nk Kukke

error: Content is protected !!
Scroll to Top