ಹಳೆನೇರೆಂಕಿ ನಫೀಸತುಲ್ ಮಿಸ್ರಿಯಾ ದುವಾ ಕಾಲೇಜು ವಾರ್ಷಿಕೋತ್ಸವ ➤ ಆಧ್ಯಾತ್ಮಿಕ ಮಜ್ಲಿಸುನ್ನೂರು ಸಂಗಮ, ಏಕದಿನ ಧಾರ್ಮಿಕ ಪ್ರಭಾಷಣ

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಜ.14  ಹಳೆನೇರೆಂಕಿ ಮುಹಿಯದ್ದೀನ್ ಜುಮಾ ಮಸೀದಿಯ ಆಶ್ರಯದಲ್ಲಿ ನಡೆಯುತ್ತಿರುವ ನಫೀಸತುಲ್ ಮಿಸ್ರಿಯಾ ದುವಾ ಕಾಲೇಜಿನ ದ್ವಿತೀಯ ವಾರ್ಷಿಕೋತ್ಸವ ಮತ್ತು ಇದರ ಅಂಗವಾಗಿ ಮಜ್ಲಿಸುನ್ನೂರು ಸಂಗಮ, ಏಕದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ಜ. 12ರಂದು ಜರಗಿತು.

ಹಳೆನೇರೆಂಕಿ ಮುಹಿಯದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷ ಶರಫುದ್ದೀನ್ ತಂಙಳ್ ಸಾಲ್ಮರ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಮ್ಮೇಳನ ನಡೆಯಿತು. ಕೆ.ಆರ್. ಹುಸೈನ್ ದಾರಿಮಿ ದಿಕ್ಸೂಚಿ ಭಾಷಣ ಮಾಡಿದರು, ಕೇರಳ ಪಯ್ಯನ್ನೂರು ಅಬೂಬಕ್ಕರ್ ಸಿದ್ದಿಕ್ ಅಝ್‍ಹರಿ ಮುಖ್ಯ ಪ್ರಭಾಷಣ ನೀಡಿದರು. ಮುಲ್ಕಿ ಕೇಂದ್ರ ಜುಮಾ ಮಸೀದಿ ಖತೀಬ್ ಎಸ್.ಬಿ. ಮಹಮ್ಮದ್ ದಾರಿಮಿ, ಪಾತೂರು ಮಾಹಿನ್ ದಾರಿಮಿ, ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಹಳೆನೇರೆಂಕಿ ಎನ್.ಎಂ.ಡಿ.ಸಿ. ಪ್ರಾಂಶುಪಾಲ್ ಅಬ್ದುಲ್ ರಹ್‍ಮಾನ್ ದಾರಿಮಿ ತಬೂಕ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ರಫೀಕ್ ಮಾಸ್ಟರ್ ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದಲ್ಲಿ ಕುಂತೂರು ಮಸೀದಿಯ ಅಬ್ದುಲ್ ಮಜೀದ್ ದಾರಿಮಿ, ನೆಕ್ಕರೆ ಮಸೀದಿಯ ಖತೀಬ್ ಖಾಲಿದ್ ಫೈಝಿ, ಕುಂಡಾಜೆ ಮಸೀದಿ ಖತೀಬ್ ಮುನೀರ್ ಅನ್ವರ್, ಎನ್.ಎಂ.ಡಿ.ಸಿ. ಚೇರ್ ಮೆನ್ ಹನೀಫ್ ದಾರಿಮಿ ಸವಣೂರು, ಮೆನೇಜರ್ ಅಬ್ದುಲ್ ರಜಾಕ್ ದಾರಿಮಿ, ಹಾಜಿ ಯೂಸುಫ್ ಗುಡ್ಡೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ವಿಪರೀತ ಮಳೆಗೆ ಕುಸಿದು ಬಿದ್ದ ಮನೆ ➤ ಮಳೆಹಾನಿ ಯೋಜನೆಯಡಿ ರೂ.5 ಲಕ್ಷ ಒದಗಿಸಿಕೊಡುವ ಭರವಸೆ

ಆಧ್ಯಾತ್ಮಿಕ ಮಜ್ಲಿಸುನ್ನೂರು ಸಂಗಮ:
ಮಗ್‍ರಿಬ್ ನಮಾಜು ಬಳಿಕ ನಡೆದ ಆಧ್ಯಾತ್ಮಿಕ ಮಜ್ಲಿಸುನ್ನೂರು ಸಂಗಮ ಕಾರ್ಯಕ್ರಮವನ್ನು ಗಂಡಿಬಾಗಿಲು ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್ ದುವಾಃ ನೆರವೇರಿಸಿ ಉದ್ಘಾಟಿಸಿದರು. ಹಳೆನೇರೆಂಕಿ ಮುಹಿಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಬೈಲಂಗಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಮ್ಮಾರ ಶರೀಅತ್ ಕಾಲೇಜು ಅಧ್ಯಕ್ಷ ಎನ್.ಎ. ಇಸಾಕ್, ಗಂಡಿಬಾಗಿಲು ಮಸೀದಿ ಕಾರ್ಯದರ್ಶಿ ಮಹಮ್ಮದ್ ರಫೀಕ್, ಉಪಾಧ್ಯಕ್ಷ ಜಿ. ಇಸ್ಮಾಯಿಲ್, ಮಹಮ್ಮದ್ ಹಾಜಿ ಆತೂರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ. 12ರಂದು ಬೆಳಿಗ್ಗೆ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಆರ್. ಅಬ್ದುಲ್ ಖಾದರ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆ ಹಳೆನೇರೆಂಕಿ ಮಸೀದಿ ಮುದರ್ರಿಸ್ ಹನೀಫ್ ದಾರಿಮಿ ನೇತೃತ್ವದಲ್ಲಿ ದರ್ಗಾ ಕೂಟು ಝಿಯಾರತ್ ನಡೆಯಿತು. ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ರಜಾಕ್ ದಾರಿಮಿ ಸ್ವಾಗತಿಸಿ, ಮಸೀದಿ ಕಾರ್ಯದರ್ಶಿ ಜಿ. ಆದಂ ವಂದಿಸಿದರು. ಪದಾಧಿಕಾರಿಗಳಾದ ಸುಲೈಮಾನ್ ನೂಜೊಲು, ರಫೀಕ್ ಪಾದೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿ.ಎ. ಮರ್ಧಾಳ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top