ಜಿಲ್ಲಾ ಮಟ್ಟದ ಯುವಜನ ಮೇಳ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.14  2019-20 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ. ಜಿಲ್ಲೆ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ಬಳಂಜ, ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ, ಬೆಳ್ತಂಗಡಿ, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ  ಯೋಜನೆ (ರಿ), ಧರ್ಮಸ್ಥಳ, ಹಾಗೂ ಶ್ರೀ ಉಮಾಮೇಶ್ವರ ಯುವಕ ಮಂಡಲ (ರಿ), ಬಳಂಜ ಬೆಳ್ತಂಗಡಿ ತಾಲೂಕು ಇವರುಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 18 ರಿಂದ 19 ವರೆಗೆ  ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಳಂಜ, ಬೆಳ್ತಂಗಡಿ ತಾಲೂಕಿನಲ್ಲಿ ಪೂರ್ವಾಹ್ನ 10.30 ಗಂಟೆಗೆ ನಡೆಸಲಾಗುವುದು.


ಈ ಯುವಜನ ಮೇಳದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯ ವಿವಿರ ಇಂತಿವೆ: ಭಾವಗೀತೆ (ವೈಯಕ್ತಿಕ) 3 ನಿಮಿಷ, ಲಾವಣಿ (ವೈಯಕ್ತಿಕ) 4 ನಿಮಿಷ, ರಂಗಗೀತೆ (ವೈಯಕ್ತಿಕ) 3 ನಿಮಿಷ, ಏಕಪಾತ್ರಾಭಿನಯ (ವೈಯಕ್ತಿಕ) 5 ನಿಮಿಷ, ತುಳು ಭಾವಗೀತೆ (ವೈಯಕ್ತಿಕ) 3 ನಿಮಿಷ, ಗೀಗೀಪದ 5 ಜನ 4 ನಿಮಿಷ, ಜಾನಪದ ಗೀತೆ 6 ಜನ 4 ನಿಮಿಷ,  ಜಾನಪದ ನೃತ್ಯ 12 ಜನ 10 ನಿಮಿಷ, ಕೋಲಾಟ 12 ಜನ 6 ನಿಮಿಷ, ಭಜನೆ 8 ಜನ  07 ನಿಮಿಷ, ತುಳು ಪಾಡ್ದನ 2 ಜನ 03 ನಿಮಿಷ, ತುಳು ಜಾನಪದ ನೃತ್ಯ 10 ಜನ 10 ನಿಮಿಷ, ರಾಗಿ/ಜೋಳ ಬೀಸುವ ಪದ (ಯುವತಿಯರಿಗೆ ಮಾತ್ರ) 2 ಜನ 3 ನಿಮಿಷ, ಸೋಬಾನೆ ಪದ (ಯುವತಿಯರಿಗೆ ಮಾತ್ರ) 4 ಜನ 5 ನಿಮಿಷ, ವೀರಗಾಸೆ (ಯುವಕರಿಗೆ ಮಾತ್ರ) 12 ಜನ 10 ನಿಮಿಷ, ಡೊಳ್ಳುಕುಣಿತ (ಯುವಕರಿಗೆ ಮಾತ್ರ) 12 ಜನ 10 ನಿಮಿಷ, ದೊಡ್ಡಾಟ (ಯುವಕರಿಗೆ ಮಾತ್ರ) 15 ಜನ 45 ನಿಮಿಷ, ಸಣ್ಣಾಟ (ಯುವಕರಿಗೆ ಮಾತ್ರ) 12 ಜನ 30 ನಿಮಿಷ, ಯಕ್ಷಗಾನ (ಯುವಕರಿಗೆ ಮಾತ್ರ) 15 ಜನ 45 ನಿಮಿಷ, ಚರ್ಮವಾದ್ಯ ಮೇಳ (ಯುವಕರಿಗೆ ಮಾತ್ರ) 6 ಜನ 10 ನಿಮಿಷ.


ಈ ಯುವಜನ ಮೇಳದಲ್ಲಿ  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಾವಣೆಗೊಂಡ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ತಾಲೂಕಿನ ಕ್ರೀಯಾಶೀಲ ಯುವಕ/ಯುವತಿ ಮಂಡಲದ 15 ರಿಂದ 35 ವರ್ಷದೊಳಗಿನ ಸದಸ್ಯರುಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆಗಳಲ್ಲಿ   ಭಾಗವಹಿಸುವ  ಎಲ್ಲಾ  ಯುವಕ/ಯುವತಿಯರು  ಜನವರಿ 18 ರಂದು ಬೆಳಿಗ್ಗೆ 9 ಗಂಟೆಗೆಯೊಳಗೆ ಸಂಘಟಕರಲ್ಲಿ ದೂರವಾಣಿ ಸಂಖ್ಯೆ: 9901304348, 7975352686, 9480858238, 8971076439 ಮೂಲಕ ಸಂಪರ್ಕಿಸಿ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು ಎಂದು ದ.ಕ. ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group